Select Your Language

Notifications

webdunia
webdunia
webdunia
webdunia

ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ: ಓರ್ವ ಆರೋಪಿ ಬಂಧನ

ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ: ಓರ್ವ ಆರೋಪಿ ಬಂಧನ
ಬೆಂಗಳೂರು , ಬುಧವಾರ, 17 ಆಗಸ್ಟ್ 2016 (10:17 IST)
ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
 
ಬಂಧಿತ ಆರೋಪಿಯನ್ನು ತಮಿಳುನಾಡಿನ ಸತ್ಯಮಂಗಲ ಮೂಲದ ಮಹಮ್ಮದ್ (46) ಎಂದು ಗುರುತಿಸಲಾಗಿದೆ. ಬಾಂಬ್ ಸ್ಫೋಟಕ್ಕೂ ಮುನ್ನ ಏಳು ಬಾರಿ ತಮಿಳುನಾಡಿನಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಆರೋಪಿ ಮಹಮ್ಮದ್ ಭಾಗಿಯಾಗಿದ್ದ ಎಂದು ಹೇಳಲಾಗುತ್ತದೆ.
 
ಕೊಯಮತ್ತೂರು ಬಾಂಬ್ ಸ್ಫೋಟ್ ಹಾಗೂ ಮಣಿರತ್ನಂ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಆರೋಪಿ ಮಹಮ್ಮದ್ ಒಟ್ಟು ಏಳು ಪ್ರಕರಣಗಳಲ್ಲಿ ಭಾಗಿಯಾದ ಆರೋಪದಡಿ ಸುದೀರ್ಘ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ.
 
ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಆರೋಪ ಎದುರಿಸುತ್ತಿರುವ ಮಹಮ್ಮದ್, 1997 ರಲ್ಲಿ ನಡೆದ ಸ್ಫೋಟದಲ್ಲಿ ಇರೋಡ್, ತಿರುಚ್ಚಿ ಸೇರಿದಂತೆ ಮೂರು ಸ್ಥಳದಲ್ಲಿ ಬಾಂಬ್ ಇರಿಸಿ 11 ಅಮಾಯಕರ ಸಾವಿಗೆ ಕಾರಣವಾಗಿದ್ದ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್.ಈಶ್ವರಪ್ಪಗೆ ಬ್ರೇಕ್ ಹಾಕಲು ಬಿಎಸ್‌ವೈ ಮಾಸ್ಟರ್ ಪ್ಲ್ಯಾನ್!