Select Your Language

Notifications

webdunia
webdunia
webdunia
webdunia

ಪುತ್ರನ ಅಕ್ರಮ ಚಟುವಟಿಕೆಗಳಿಗೆ ಸಚಿವ ಮಹದೇವಪ್ಪ ಸಾಥ್: ಈಶ್ವರಪ್ಪ ಆರೋಪ

ಪುತ್ರನ ಅಕ್ರಮ ಚಟುವಟಿಕೆಗಳಿಗೆ ಸಚಿವ ಮಹದೇವಪ್ಪ ಸಾಥ್: ಈಶ್ವರಪ್ಪ ಆರೋಪ
ಬೆಂಗಳೂರು , ಬುಧವಾರ, 6 ಜುಲೈ 2016 (10:25 IST)
ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ತಮ್ಮ ಪುತ್ರನ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
 
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಕೆ.ಎಸ್‌.ಈಶ್ವರಪ್ಪ, ಮೈಸೂರು ಜಿಲ್ಲೆಯ ಟಿ ನರಸಿಪುರದಲ್ಲಿ ಸಾಮಿರಾರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಕೃಷ್ಟ, ಭೀಮಾ, ತುಂಗಭದ್ರ ನದಿಗಳ ದಂಡೆಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಪ್ರಾಮಾಣಿಕ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಆದರೆ, ಅಧಿಕಾರಿಗಳಿಗೆ ಬೆದರಿಕೆ ಹಾಕಿ ತನಿಖೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಈ ಹಿಂದೆ ಭೂವಿಜ್ಞಾನಿಯೊಬ್ಬ ವ್ಯಕ್ತಿಯೊಬ್ಬರಿಂದ ಹಣ ಪಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಪತ್ರದ ಮುಖಾಂತರ ಹೇಳಿಕೆ ನೀಡಿದ ಭೂವಿಜ್ಞಾನಿ, ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅಕ್ರಮ ಮರಳು ಸಾಗಟಾ ಸಂಬಂಧ ವ್ಯಕ್ತಿಯೊಬ್ಬನ ಬಳಿ ಹಣ ಪಡೆದುಕೊಳ್ಳುವಂತೆ ಹೇಳಿದ್ದರು. ಹಾಗಾಗೀ ಹಣವನ್ನು ತೆಗೆದುಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಗೆ ತಕ್ಕ ಮಗಳಾಗದವಳು ಮೋದಿಗೇನು ಮಾಡಬಲ್ಲಳು?