Select Your Language

Notifications

webdunia
webdunia
webdunia
webdunia

ಮಹದಾಯಿ ತೀರ್ಪು ಕರ್ನಾಟಕದ ವಿರುದ್ಧ: ಖರ್ಗೆ ವಿಷಾದ

ಮಹದಾಯಿ ತೀರ್ಪು ಕರ್ನಾಟಕದ ವಿರುದ್ಧ: ಖರ್ಗೆ ವಿಷಾದ
ಕಲಬುರ್ಗಿ , ಶನಿವಾರ, 30 ಜುಲೈ 2016 (16:29 IST)
ಮಹದಾಯಿ ನ್ಯಾಯಾಧಿಕರಣದ ತೀರ್ಪು ಕರ್ನಾಟಕದ ವಿರುದ್ಧ ಬಂದಿರುವುದು ದುರ್ದೈವದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನ್ಯಾಯಾಧಿಕರಣದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದರಿಂದ ಆಕ್ರೋಶಗೊಂಡ ರೈತಪರ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
 
ನ್ಯಾಯಾಧಿಕರಣವನ್ನು ನಂಬಿ ಇನ್ನು ಮುಂದೆ ಕಾಲ ಕಳೆಯಲು ಸಾಧ್ಯವಿಲ್ಲ. ಇಂಥಹ ಸಮಸ್ಯೆಗಳಿಗೆ ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕು. ಪ್ರಧಾನಿ ಅವರು ಮನಸ್ಸು ಮಾಡಿದರೆ ಮಹದಾನಿ ನದಿ ನೀರು ಹಂಚಿಕೆ ವಿವಾದ ಕೇವಲ ಎರಡು ನಿಮಿಷದಲ್ಲಿ ಇತ್ಯರ್ಥವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಓಕೆ ಮುಕ್ತಿಗೆ ಚಳುವಳಿ ಆರಂಭಿಸಿ: ಬಾಬಾ ರಾಮದೇವ್