Webdunia - Bharat's app for daily news and videos

Install App

ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಎಂ.ಟೆಕ್ ವಿದ್ಯಾರ್ಥಿಗಳ ಬಂಧನ

Webdunia
ಬುಧವಾರ, 25 ಮೇ 2016 (15:12 IST)
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ನಗರದ ಈಸ್ಟ್ ವೆಸ್ಟ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಬಸವೇಶ್ವರ ನಗರದ ನಿವಾಸಿ ರಾಘವೇಂದ್ರ ಮತ್ತು ಉಲ್ಲಾಳ ನಗರ ನಿವಾಸಿ ಹೊಯ್ಸಳ ಬಂಧಿತ ಆರೋಪಿಗಳು ಎಂ.ಟೆಕ್ ವಿದ್ಯಾರ್ಥಿಗಳಾಗಿದ್ದಾರೆ. 
 
ಈ ಇಬ್ಬರು ಆರೋಪಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರು ಕಿರುಕುಳ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ಕುತಂತ್ರ ಮಾಡಿ ಅವರನ್ನು ಪೊಲೀಸರ ಕೈಗೆ ಸಿಕ್ಕಿಸಲು ತಮ್ಮ ಪ್ರಾಧ್ಯಾಪಕರ ಹೆಸರಿನಲ್ಲಿ ಇ-ಮೇಲ್‌ ಸಂದೇಶ ರವಾನೆ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಬಾಂಬ್ ಹಾಕಿದ್ದರು.
 
ಬಂಧಿತ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಾದ ಪ್ರಸನ್ನ ರಾಜು, ಧನರಾಜ್ ಮತ್ತು ಚಂದನ್ ರಾಜ್ ಅವರ ಪೋಟೋಗಳನ್ನು ಇ-ಮೇಲ್ ಮೂಲಕ ವಿಮಾನ ನಿಲ್ದಾಣಕ್ಕೆ ಕಳುಹಿಸಿ, ಈ ವ್ಯಕ್ತಿಗಳು ದಾವೂದ್ ಇಬ್ರಾಹಿಂ ಆಪ್ತರು, ಇವರುಗಳ ಮೂಲಕ 10 ದಶಲಕ್ಷ ಡಾಲರ್ ನೀಡಬೇಕು. ಇಲ್ಲವಾದಲ್ಲಿ ವಿಮಾನ ಅಪಹರಣ ಮತ್ತು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋವಿಡ್ ದೃಢಪಟ್ಟವರಲ್ಲೇ ಹೆಚ್ಚು ಹೃದಯಾಘಾತ: ಕೋವಿಡ್ ಲಸಿಕೆ ಬಗ್ಗೆ ದಿನೇಶ್ ಗುಂಡೂರಾವ್‌ ಸ್ಫೋಟಕ ಮಾಹಿತಿ

ಯಾದಗಿರಿ: ಕಲುಷಿತ ನೀರು ಸೇವನೆ, ಮೂವರು ಸಾವು, ಹಲವರು ಅಸ್ವಸ್ಥ

26/11 ಮುಂಬೈ ದಾಳಿ: ಮಾಸ್ಟರ್ ಮೈಂಡ್ ರಾಣಾ ಬಾಯಿಂದ್ದ ಹೊರಬಿತ್ತು ಭಯಾನಕ ಸತ್ಯ

Video: 18 ಅಡಿ ಉದ್ದದ ಹಾವನ್ನು ಏಕಾಂಗಿಯಾಗಿ ಸೆರೆಹಿಡಿದ ಕೆಚ್ಚೆದೆಯ ಮಹಿಳಾ ಅಧಿಕಾರಿ

ಅಮ್ಮನ ಜೊತೆ ಸೇರಿಕೊಂಡು ಅತ್ತೆಗೆ ಸೊಸೆ ಹೀಗೆ ಮಾಡೋದಾ: ಶಾಕಿಂಗ್ ವಿಡಿಯೋ

ಮುಂದಿನ ಸುದ್ದಿ
Show comments