Webdunia - Bharat's app for daily news and videos

Install App

ಗಗನಸಖಿಯನ್ನು ತಳ್ಳಿಕೊಂದ ಪ್ರಿಯಕರ

Webdunia
ಬುಧವಾರ, 15 ಮಾರ್ಚ್ 2023 (17:13 IST)
ಬೆಂಗಳೂರು ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್​ವೊಂದರ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಗನಸಖಿ ಅರ್ಚನಾ ಆತ್ಮಹತ್ಯೆ ಅಲ್ಲ ಕೊಲೆ ಎನ್ನುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅರ್ಚನಾಳನ್ನ ಆಕೆಯ ಬಾಯ್​ ಫ್ರೆಂಡ್ ಆದೇಶ್​ ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ.. ಈ ಹಿನ್ನೆಲೆಯಲ್ಲಿ ಕೋರಮಂಗಲ ಪೊಲೀಸರು ಅರ್ಚನಾಳ ಪ್ರಿಯಕರ ಆದೇಶ್​ ವಿರುದ್ಧ IPC 302 ಅಡಿಯಲ್ಲಿ FIR ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಹಿಮಾಚಲ ಮೂಲದ ಅರ್ಚನಾ ಹಾಗೂ ಕೇರಳ ಮೂಲದ ಆದೇಶ್​ ಡೇಟಿಂಗ್​ ಅ್ಯಪ್​ನಲ್ಲಿ ಪರಿಚಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಏರ್​ಲೈನ್ಸ್​​ನಲ್ಲಿ ಗಗನಸಖೆಯಾಗಿದ್ದರೆ, ಆದೇಶ್​ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು. ಆದ್ರೆ, ಮಾರ್ಚ್​ 11ರಂದು ಅರ್ಚನಾ ಆದೇಶ ತಂಗಿದ್ದ ಅಪಾರ್ಟ್ಮೆಂಟ್​ ಮೇಲಿಂದ ಬಿದ್ದು ಮೃತಪಟ್ಟಿದ್ದಳು. ಬಳಿಕ ಆದೇಶ್​, ನಶೆಯಲ್ಲಿ ಬಿಲ್ಡಿಂಗ್​​​​ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆಗೆ ಕರೆ ಮಾಡಿ ಹೇಳಿದ್ದ. ಅಲ್ಲದೇ ಪೊಲೀಸರಿಗೂ ಇದೇ ಹೇಳಿದ್ದ. ಆದ್ರೆ, ಈ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಬಂದಿದ್ದು, ಇದು ಆಕಸ್ಮಿಕವಾಗಿ ಬಿದ್ದಿರುವುದಲ್ಲ. ಆದೇಶ್​ ಆಕೆಯನ್ನು ಮೇಲಿಂದ ತಳ್ಳಿದ್ದಾನೆ ಎಂದು ದೂರು ನೀಡಿದ್ದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ನೈರುತ್ಯ ರೈಲ್ವೆ ವ್ಯಾಪ್ತಿಗೆ: ಕೇರಳ ಅಡ್ಡಗಾಲು ಬೆನ್ನನ್ನೇ ಡಿಕೆ ಶಿವಕುಮಾರ್‌ಗೆ ಬ್ರಿಜೇಶ್ ಚೌಟ ಪತ್ರ

ಮೊಬೈಲ್ ಕೊಡಲಿಲ್ಲವೆಂದು ಸಹೋದರಿಯನ್ನು ಕೊಂದಿದ್ದ ತಮ್ಮನಿಗೆ 4ವರ್ಷದ ಬಳಿಕ ತೀರ್ಪು ಪ್ರಕಟ

ರಾಜಧಾನಿಯ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2,500

ಯಾರಿಂದಲೂ ಇನ್ನೊಬ್ಬರ ನಾಯಕತ್ವವನ್ನು ತಪ್ಪಿಸೋಕೆ ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

Toxic Cinema: ರುಕ್ಮಿಣಿ ನಿಮ್ಮಿಂದ ಇದನ್ನು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ

ಮುಂದಿನ ಸುದ್ದಿ
Show comments