Webdunia - Bharat's app for daily news and videos

Install App

ಬೇರೊಬ್ಬನ ಬೈಕ್ ಮೇಲೆ ತನ್ನ ಪ್ರೇಯಸಿ ಹೆಸರು: ಬೈಕ್‌ನ್ನೆ ಸುಟ್ಟು ಹಾಕಿದ ಪ್ರೇಮಿ

Webdunia
ಬುಧವಾರ, 28 ಜನವರಿ 2015 (10:37 IST)
ತಾನು ಪ್ರೀತಿಸಿದ ಯುವತಿಯ ಹೆಸರನ್ನು ಬೈಕ್ ಮೇಲೆ ಬರೆಸಿಕೊಂಡ ಯುವಕನ ಬೈಕ್‌ನ್ನು ಸುಟ್ಟು ಹಾಕಿದ್ದ ಆರೋಪಿ ಮತ್ತು ಆತನಿಗೆ ಸಹಾಯ ಮಾಡಿದ ಸ್ನೇಹಿತನನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಹ್ಯಾರಿ ಅಲೆಕ್ಸ್ ಎಂಬ 22 ವರ್ಷದ ಯುವಕ ತನ್ನ ಸ್ನೇಹಿತ ಅನ್ಬು( 28) ಜತೆ ಸೇರಿ ಅರುಣ್ ಕುಮಾರ್ ಎಂಬಾತನ ಬೈಕ್‌ನ್ನು ಸುಟ್ಟು ಹಾಕಿದ್ದರು.
 
ಆರೋಪಿಗಳಿಬ್ಬರು ಲಾಲ್‌ಬಾಗ್ ರಸ್ತೆಯ ಕೆ.ಎಸ್. ಗಾರ್ಡನ್ ನಿವಾಸಿಗಳಾಗಿದ್ದಾರೆ.
 
ಆರೋಪಿ ಹ್ಯಾರಿ ಅಲೆಕ್ಸ್ ಆನೇಪಾಳ್ಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅದೇ ಊರಿನ ನಿವಾಸಿಯಾದ ಅರುಣ್ ಕುಮಾರ್ ತನ್ನ ಬೈಕ್‌ನ ನೋಂದಣಿ ಸಂಖ್ಯೆ ಫಲಕದ ಮೇಲೆ ಆ ಹುಡುಗಿಯ ಹೆಸರನ್ನು ಬರೆಸಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಅಲೆಕ್ಸ್ ಆ ಹೆಸರನ್ನು ಅಳಿಸುವಂತೆ ತಾಕೀತು ಮಾಡಿದ್ದ. ಆದರೆ ಅರುಣ್ ಕುಮಾರ್ ಆತನ ಮಾತಿಗೆ ಕ್ಯಾರೇ ಅನ್ನಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಹ್ಯಾರಿ ತನ್ನ ಸ್ನೇಹಿತ ಅನ್ಬು ಜತೆ ಸೇರಿ  ಅರುಣ್ ಬೈಕ್‌ನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments