Webdunia - Bharat's app for daily news and videos

Install App

ಯೋಧನಿಂದ ಲವ್, ಸೆಕ್ಸ್, ಧೋಖಾ?

Webdunia
ಶುಕ್ರವಾರ, 28 ಸೆಪ್ಟಂಬರ್ 2018 (13:58 IST)
ಫೇಸ್ ಬುಕ್ ನಲ್ಲಿ ಪರಿಚಯವಾದ ಯೋಧನೋರ್ವ ವಿವಾಹವಾಗುವುದಾಗಿ ನಂಬಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದು, ಯುವತಿ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ಮೈಸೂರು ಇಲವಾಲ ಹೋಬಳಿಯ ನಿವಾಸಿ ರಂಜಿತ್ ಎಂಬಾತ ಕಾಶ್ಮೀರದ ಗಡಿಯಲ್ಲಿ ದೇಶಕಾಯುವ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ಬಟ್ಟೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನತಾನಗರ ನಿವಾಸಿ ಅಂಬಿಕಾ ಎಂಬವಳ ಪರಿಚಯ ಫೇಸ್ ಬುಕ್ ಮೂಲಕ ಆಗಿತ್ತು.  ಈತ ಸೆ.5ರಂದು ರಜೆಗೆ ಊರಿಗೆ ಬಂದಿದ್ದು, ಆಕೆಯನ್ನು ಸುತ್ತಾಡಿಸಿದ್ದಾನೆ. ಅಷ್ಟೇ ಅಲ್ಲದೇ ಹೋಟೆಲ್ ನಲ್ಲಿ ರೂಮು ಮಾಡಿ ಇರಿಸಿಕೊಂಡಿದ್ದ. ಹುಟ್ಟು ಹಬ್ಬದ ಪಾರ್ಟಿಯನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದ ಎನ್ನಲಾಗಿದೆ. ಯುವತಿ ಯೋಧನಲ್ಲಿ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಯೋಧ ವಿವಾಹಕ್ಕೆ ನಿರಾಕರಿಸಿದ್ದಾನೆ ಎನ್ನಲಾಗಿದೆ.

ಯುವತಿ ಇದೀಗ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ. ತನ್ನನ್ನು ಬಳಸಿಕೊಂಡು ವಿವಾಹವಾಗಲು ಹೇಳಿದರೆ ನಿರಾಕರಿಸಿದ್ದಾನೆಂದು ಯೋಧನ ವಿರುದ್ಧ ದೂರು ದಾಖಲಿಸಿದ್ದಾಳೆ. ಯೋಧ ಅಕ್ಟೋಬರ್ 5ಕ್ಕೆ ಮತ್ತೆ ಕರ್ತವ್ಯಕ್ಕೆ ವಾಪಸ್ಸಾಗಲಿದ್ದು, ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ. ಯುವತಿಗೆ ಆದ ಅನ್ಯಾಯವನ್ನು  ಸರಿಪಡಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾತೃಪಕ್ಷಕ್ಕೆ ಮೋಸಮಾಡಿದ ಸಿದ್ದರಾಮಯ್ಯನವರು ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ: ನಿಖಿಲ್ ಕುಮಾರಸ್ವಾಮಿ

ಇರಾನ್ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಬೆಲೆ ಏರಿಕೆಯ ಮಧ್ಯೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹58.50ಕಡಿತ

ಕೈಲಾಗದವನು ಮೈಪರಚಿಕೊಂಡ, ಕೋವಿಡ್ ಲಸಿಕೆ ಬಿಜೆಪಿ ಲಸಿಕೆಯಲ್ಲ: ಸಿಎಂಗೆ ಟಾಂಗ್ ಕೊಟ್ಟ ಆರ್‌ ಅಶೋಕ್‌

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ಮುಂದಿನ ಸುದ್ದಿ