Select Your Language

Notifications

webdunia
webdunia
webdunia
webdunia

ಲಾಟರಿ ಪ್ರಕರಣದ ಕಿಂಗ್‌ಪಿನ್ ರಾಜನ್ ಬೆಂಗಳೂರಿಗೆ ಶಿಫ್ಟ್

ಲಾಟರಿ ಪ್ರಕರಣದ ಕಿಂಗ್‌ಪಿನ್ ರಾಜನ್ ಬೆಂಗಳೂರಿಗೆ ಶಿಫ್ಟ್
ಕೋಲಾರ , ಸೋಮವಾರ, 25 ಮೇ 2015 (18:00 IST)
ಒಂದಂಕಿ ಲಾಟರಿ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪಾರಿರಾಜನ್‌ನನ್ನು ಸರ್ಕಾರವು ನಗರದ ಉಪಕಾರಾಗೃಹದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದ್ದು, ಕರೆ ತರಲಾಗಗುತ್ತಿದೆ. 
 
ನಾಲ್ವರು ಪೇದೆ ಹಾಗೂ ಓರ್ವ ಎಸ್‌ಐ ನೇತೃತ್ವದ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಇನ್ನು ಮುಂದೆ ನಗರದ ಅಗ್ರಹಾರ ಜೈಲಿನಲ್ಲಿಯೇ ಉಳಿದುಕೊಳ್ಳಲಿದ್ದಾನೆ ಎನ್ನಲಾಗಿದೆ. 
 
ಪ್ರಕರಣವೇನು ?
ಲಾಟರಿ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆಗಿರುವ ಈತನನ್ನು ಬಂಧಿಸಿ ಕೋಲಾರದ ಜೈಲಿನಲ್ಲಿಡಲಾಗಿತ್ತು. ಆದರೆ ಎದೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಈತನನ್ನು ಕಳೆದ ಎರಡು ದಿನಗಳ ಹಿಂದೆ ಬಂಗಾರಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಜೈಲರ್ ಗಳು ವೈದ್ಯರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯವೂ ಕೂಡ ಅನುಮತಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಆತನ್ನು ಅಗ್ರಹಾರ ಜೈಲಿಗೆ ಕರೆತರಲಾಗುತ್ತಿದ್ದು, ಚಿಕಿತ್ಸೆ ಅಗತ್ಯವೆನಿಸಿದಲ್ಲಿ ಇಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಲಾಟರಿ ಹಗರಣದಲ್ಲಿ ಮುಖ್ಯ ಆರೋಪಿಯಾಗಿದ್ದು, ಬಹುಕೋಟಿ ಅವ್ಯವಹಾರ ನಡೆಸಿದ್ದಾನೆ ಎಂಬ ಆರೋಪ ಹಿನ್ನೆಲೆಯಲ್ಲಿ ಈತನನ್ನು ಮೇ 16ರಂದು ಬಂಧಿಸಲಾಗಿತ್ತು. 

Share this Story:

Follow Webdunia kannada