Select Your Language

Notifications

webdunia
webdunia
webdunia
webdunia

ಲಾರಿ ಪಲ್ಟಿ: ಇಬ್ಬರ ದುರ್ಮರಣ

ಲಾರಿ ಪಲ್ಟಿ: ಇಬ್ಬರ ದುರ್ಮರಣ
ಚಿತ್ರದುರ್ಗ , ಶುಕ್ರವಾರ, 19 ಡಿಸೆಂಬರ್ 2014 (08:55 IST)
ಚಲಿಸುತ್ತಿದ್ದ ಲಾರಿಯೊಂದು ಪಲ್ಟಿ ಹೊಡೆದ ಪರಿಣಾಮ ಗಂಭೀರ ಅಪಘಾತ ಸಂಭವಿಸಿದ್ದು, ಚಾಕನೂ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ. 
 
ಘಟನೆಯಲ್ಲಿ ಮೃತಪಟ್ಟವರನ್ನು ಚಾಲಕ ಮುರಳಿ(30) ಹಾಗೂ ರಾಜೇಂದ್ರ ನಾಯ್ಡು(35) ಎನ್ನಲಾಗಿದೆ. ಇವರೊಂದಿಗೆ ಆಂಧ್ರ ಮೂಲದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. 
 
ಇನ್ನು ಈ ಘಟನೆ ಇಲ್ಲಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.  

Share this Story:

Follow Webdunia kannada