Select Your Language

Notifications

webdunia
webdunia
webdunia
webdunia

ಲೋಕಾಯುಕ್ತ ನೇಮಕ ವಿಚಾರ ಹಾದಿ, ಬೀದಿಯಲ್ಲಿ ಮಾತನಾಡಬಾರದು: ದೇವೇಗೌಡ

ಲೋಕಾಯುಕ್ತ ನೇಮಕ ವಿಚಾರ ಹಾದಿ, ಬೀದಿಯಲ್ಲಿ ಮಾತನಾಡಬಾರದು: ದೇವೇಗೌಡ
ಬೆಂಗಳೂರು , ಗುರುವಾರ, 14 ಜನವರಿ 2016 (14:15 IST)
ರಾಜ್ಯದಲ್ಲಿ ಲೋಕಾಯುಕ್ತರ ನೇಮಕ ವಿಚಾರವಾಗಿ ಹಾದಿ ಬೀದಿಯಲ್ಲಿ ಮಾತನಾಡಬಾರದು ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಸಾಕಷ್ಟು ಮಂದಿ ನ್ಯಾಯಮೂರ್ತಿಗಳಿದ್ದಾರೆ. ಆದರೆ ಬಿಜೆಪಿ ವಿಕ್ರಂ ಜಿತ್ ಸೇನ್ ಅವರು ತಮಗೆ ಲೋಕಾಯುಕ್ತ ಹುದ್ದೆಯ ಕುರಿತು ಒಲವು ತೋರದಿದ್ದರೂ ಅವರ ಹೆಸರನ್ನೇ ಬಿಜೆಪಿ ಸೂಚಿಸುತ್ತಿದೆ. ಬಿಜೆಪಿಗೆ ವಿಕ್ರಂಜಿತ್ ಸೇನ್ ಅವರೇ ಏಕೆ ಬೇಕು ಎಂದು ದೇವೇಗೌಡರು ಪ್ರಶ್ನಿಸಿದರು.  ನ್ಯಾ. ಎಸ್. ಆರ್. ನಾಯಕ್ ವಿರುದ್ಧ ಆರೋಪಗಳ ದೂರು ಕೇಳಿಬಂದಿದ್ದರೂ ಕಾಂಗ್ರೆಸ್ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನೇ ಶಿಫಾರಸು ಮಾಡಲು ಮುಂದಾಗಿದೆ ಎಂದು ಗೌಡರು ಹೇಳಿದರು. 

ಮೂರು ವಿದಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ  ಮಾತನಾಡಿದ ದೇವೇಗೌಡರು ಎರಡೂ ರಾಜಕೀಯ ಪಕ್ಷಗಳು ಆರ್ಥಿಕವಾಗಿ ಸಬಲವಾಗಿವೆ.  ಆದರೆ ನಮ್ಮ ಬಳಿ ಹಣವಿಲ್ಲದಿರುವುದರಿಂದ ಹಣವಂತರನ್ನು ಆಯ್ಕೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದರು.  ಆದರೆ ಸರ್ಕಾರದಂತೆ ನಮ್ಮಿಂದ ಪ್ಯಾಕೇಜ್ ಕೊಡಲು ಸಾಧ್ಯವಿಲ್ಲ. ನಾವು ಮಾಡಿದ ಕೆಲಸ ನೋಡಿಯೇ ಜನತೆ ಮತ ಹಾಕಬೇಕು ಎಂದು ದೇವೇಗೌಡರು ಅಭಿಪ್ರಾಯಪಟ್ಟರು. 

Share this Story:

Follow Webdunia kannada