Select Your Language

Notifications

webdunia
webdunia
webdunia
webdunia

ಮತಗಣನೆ ದಿನ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ

ಮತಗಣನೆ ದಿನ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ
ಬೆಂಗಳೂರು , ಬುಧವಾರ, 14 ಮೇ 2014 (10:45 IST)
ಮೇ 16 ರಂದು ನಡೆಯಲಿರುವ ಮತಗಣನೆಯ ಪ್ರಯುಕ್ತ ಮೇ 15 ರ ಮಧ್ಯರಾತ್ರಿಯಿಂದ  ಮೇ 16 ರ ಮಧ್ಯರಾತ್ರಿಯವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಲಾಗಿದೆ. 
 
ಪೊಲೀಸ್ ಇಲಾಖೆ ಕಳುಹಿಸಿರುವ ಪತ್ರಿಕಾ ಸಂದೇಶದ ಪ್ರಕಾರ ಮತ ಎಣಿಕೆಯ ದಿನ ಕಾನೂನು ಸುವ್ಯವಸ್ಥೆ ನಿರ್ವಹಣೆಯನ್ನು ಬಿಗಿಗೊಳಿಸಲು  ಬೆಂಗಳೂರು  ಮತ್ತು ರಾಜ್ಯದಾದ್ಯಂತ ಎಲ್ಲಾ ರೆಸ್ಟೋರೆಂಟ್, ಹೊಟೇಲ್ ಮತ್ತು ಕ್ಲಬ್‌ಗಳಲ್ಲಿ ಮದ್ಯಮಾರಾಟವನ್ನು ನಿಷೇಧಿಸಲಾಗಿದೆ. 

ನಿರ್ದೇಶನವನ್ನು ಉಲ್ಲಂಘಿಸಿದವರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದೆ. 
 
ಈ ನಿಟ್ಟಿನಲ್ಲಿ ವಿವಿಧ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಅಬಕಾರಿ ಇಲಾಖೆಯ ಸಿಬ್ಬಂದಿ ನಿಯಮವನ್ನು ಅನುಸರಿಸಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲಿದ್ದಾರೆ. 
 
ಮೇ 16 ರ ಮುಂಜಾನೆ 8 ಗಂಟೆಗೆ ಮತಗಣನೆ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಎಪ್ರೀಲ್ 17 ರಂದು ಒಂದೇ ಹಂತದ ಚುನಾವಣೆ ನಡೆದಿತ್ತು.

Share this Story:

Follow Webdunia kannada