Select Your Language

Notifications

webdunia
webdunia
webdunia
webdunia

ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಭಾರತೀಯರ ಅಪಹರಣ: ಇಬ್ಬರು ಕನ್ನಡಿಗರು

ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಭಾರತೀಯರ ಅಪಹರಣ: ಇಬ್ಬರು ಕನ್ನಡಿಗರು
ಲಿಬಿಯಾ , ಶುಕ್ರವಾರ, 31 ಜುಲೈ 2015 (12:24 IST)
ನಾಲ್ವರು ಭಾರತೀಯರನ್ನು ಐಸಿಸ್ ಉಗ್ರರು ಲಿಬಿಯಾದಲ್ಲಿ ಅಪಹರಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್ ಅವರು ಇಂದು ಸಂಪೂರ್ಣ, ಅಧಿಕೃತ ಮಾಹಿತಿ ನೀಡಿದ್ದು, ಅಪಹರಣಕ್ಕೊಳಗಾಗಿರುವ ಭಾರತೀಯರು ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಿಗೆ ಸೇರಿದವರು ಎಂದು ತಿಳಿಸಿದ್ದಾರೆ.  
 
ಇಲಾಖೆಯ ಮೂಲಗಳ ಪ್ರಕಾರ, ಕನ್ನಡಿಗರಾದ ಲಕ್ಷ್ಮಿಕಾಂತ್ ಮತ್ತು ವಿಜಯ್ ಕುಮಾರ್ ಅವರನ್ನು ಲಿಬಿಯಾದ ಏರ್ಪೋರ್ಟ್ ವೊಂದರ ಮೂಲಕ ತಮ್ಮ ತಾಯ್ನಾಡಿಗೆ ಹಿಂದುರುಗಿತ್ತಿದ್ದ ವೇಳೆಯಲ್ಲಿ ಅಪಹರಿಸಿದ್ದಾರೆ ಎನ್ನಲಾಗಿದೆ. ಇನ್ನು ಲಕ್ಷ್ಮಿಕಾಂತ್ ಅವರು ರಾಜ್ಯದ ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದರೆ, ವಿಜಯ್ ಕುಮಾರ್ ಅವರು ಬೆಂಗಳೂರು ನಗರ ವಾಸಿ ಎಂದು ಹೇಳಲಾಗಿದೆ. ಇತರೆ ಇಬ್ಬರು ಆಂಧ್ರ ಪ್ರದೇಶ ಮೂಲದವರಾಗಿದ್ದು, ಹೈದರಾಬಾದಿನ ಬಲರಾಮ್ ಮತ್ತು ಶ್ರೀಕಾಕುಳಂನ ಗೋಪಿಕೃಷ್ಣ ಎಂದು ತಿಳಿದು ಬಂದಿದೆ.  
 
ಇನ್ನು ಈ ಬಗ್ಗೆ ರಾಜ್ಯದ ಈಶಾನ್ಯ ಐಜಿಪಿ ಸುನಿಲ್ ಅಗರ್ವಾಲ್ ಅವರು ಪ್ರತಿಕ್ರಿಯಿಸಿದ್ದು, ಪ್ರಜೆಗಳ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿದೇಶಾಂಗ ಇಲಾಖೆ ಹಾಗೂ ಅಪಹರಣಕ್ಕೊಳಗಾಗಿರುವವರ ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ. ಅಲ್ಲದೆ ಅವರನ್ನು ರಕ್ಷಿಸುವ ಕಾರ್ಯದಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. 
 
ವಿದೇಶಾಂಗ ಇಲಾಖೆಯ ಮೂಲಗಳ ಪ್ರಕಾರ, ಇವರೆಲ್ಲರೂ ಕೂಡ ಇಲ್ಲಿನ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಇಲ್ಲಿನ ವಿಮಾನ ನಿಲ್ದಾಣವೊಂದರಲ್ಲಿ ತಮ್ಮ ತಾಯ್ನಾಡಿಗೆ ಹಿಂದಿರಗಲು ಸಿದ್ಧತೆಯಲ್ಲಿದ್ದಾಗ ಕಳೆದ ಜುಲೈ 29ರಂದು ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. 

Share this Story:

Follow Webdunia kannada