ಪತಿಯನ್ನ ಬಿಟ್ಟು ಪ್ರಿಯಕರನ ಜೊತೆ ಲವ್ವಿಡವ್ವಿ; ಸಹಿಸದ ಗಂಡ, ಪತ್ನಿಯನ್ನ ಕೊಲೆಗೈದ!

Webdunia
ಶುಕ್ರವಾರ, 14 ಜುಲೈ 2023 (09:48 IST)
ಬೆಂಗಳೂರು : ಈ ಪೋಟೋದಲ್ಲಿರುವ ಯುವತಿಯ ಹೆಸರು ಭಾರತಿ ಮೂಲತಃ ಮಧುಗಿರಿ ಮೂಲದವಳಾದ ಈಕೆ ಕೆಲಸಕ್ಕೆ ಹೋಗುವ ವೇಳೆ ಹರೀಶ್ ಎಂಬುವವನ ಜೊತೆ ಪರಿಚಯವಾಗಿ, ಪ್ರೀತಿಯ ಬಲೆಗೆ ಬಿದ್ದು ಮದುವೆನೂ ಆಗಿದ್ದಳು.
 
ಜೊತೆಗೆ ಇಬ್ಬರ ಅನೂನ್ಯ ಸಂಸಾರಕ್ಕೆ ಇಬ್ಬರು ಮಕ್ಕಳು ಸಹ ಸಾಕ್ಷಿಯಾಗಿದ್ದು ಗಂಡ ಹೆಂಡತಿ ಇಬ್ಬರು ದುಡಿಯುವುದಕ್ಕೆಂದು ಬೆಂಗಳೂರು ಮತ್ತು ತಮಿಳುನಾಡಿಗೆ ಹೋಗಿ ಬದುಕು ಕಟ್ಟಿಕೊಂಡಿದ್ರು.

ಈ ನಡುವೆ ಭಾರತಿಗೆ ತನ್ನ ಹಳೆ ಸೋದರ ಸಂಬಂಧಿ ಗಂಗರಾಜು ಜೊತೆ ಲವ್ವಿಡವ್ವಿ ಶುರುವಾಗಿದ್ದು, ಅಲ್ಲಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡಿದ್ದ ಗಂಗರಾಜು ಜೊತೆ ಕಳೆದ 12 ದಿನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮಕ್ಕೆ ಬಂದು, ಅಲ್ಲಿ ನಾವು ಗಂಡ ಹೆಂಡತಿಯೆಂದು ಹೇಳಿ ಬಾಡಿಗೆ ಮನೆಯೊಂದನ್ನ ಪಡೆದು 4 ವರ್ಷದ ಮಗು ಜೊತೆ ವಾಸವಾಗಿದ್ದರು.

ಈ ವಿಚಾರ ತಿಳಿದುಕೊಂಡ ಗಂಡ ಹರೀಶ್ ಮೂರು ದಿನಗಳಿಂದೆ ಗ್ರಾಮಕ್ಕೆ ಬಂದಿದ್ದು, ಮನೆಯಲ್ಲಿದ್ದ ಪತ್ನಿ ಜೊತೆ ಮಾತನಾಡಿ ನಿನ್ನೆ(ಜು.13) ಮನೆಯಲ್ಲೆ ಉಳಿದುಕೊಂಡಿದ್ದಾನೆ.

ಈ ವೇಳೆ ಗಂಡ ಕುಡಿದು ಟೈಟ್ ಆಗಿದ್ದಾನೆಂದು, ಗಂಡನ ಮುಂದೆಯೆ ಪ್ರಿಯಕರನ ಜೊತೆ ಕೊಠಡಿಯಲ್ಲಿ ಮಲಗಿದ್ದಾಳೆ. ಅದನ್ನ ಗಂಡ ಹರೀಶ ನೋಡಿದ್ದನಂತೆ. ಹೀಗಾಗಿ ಆಕ್ರೋಶಗೊಂಡ ಹರೀಶ್, ಪತ್ನಿ ಜೊತೆ ಜಗಳ ಮಾಡಿದ್ದಾನೆ. ನಿನ್ನೆ ಸಂಜೆ ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ನಂತರ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಮಗುವನ್ನ ಕರೆದುಕೊಂಡು ಮನೆಗೆ ಚಿಲಕ ಹಾಕಿ, ನಂತರ ಸೀದಾ ತನ್ನ ಊರಿನತ್ತ ಹೊರಟಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ಜಿಲ್ಲೆಗೆ ಮಾತ್ರ ಇಂದು ಮಳೆಯ ಸೂಚನೆ

Bihar election result 2025: ಬಿಹಾರದಲ್ಲಿ ಯಾರಿಗೆ ಆರಂಭಿಕ ಮುನ್ನಡೆ

ಕೆಲಸ ಮಾಡುವವರಿಗಿಂತ, ಚಾಡಿ ಹೇಳುವವರೆ ಕುಮಾರಸ್ವಾಮಿಗೆ ಪ್ರಿಯ: ಜಿಟಿ ದೇವೇಗೌಡ

ಹಿಂದೂ ವಿರೋಧಿ ಹೇಳಿಕೆ, ಇದೆಲ್ಲ ಅವರುಗಳ ಸೃಷ್ಟಿ: ಮಾಜಿ ಸಚಿವ ಆಂಜನೇಯ ಸ್ಪಷ್ಟನೆ

ದೆಹಲಿ ಸ್ಪೋಟ ಪ್ರಕರಣ: ರೈಲು, ವಿಮಾನ ಪ್ರಯಾಣಿಕರಿಗೆ ಸಲಹೆ ಕೊಟ್ಟ ದೆಹಲಿ ಪೊಲೀಸರು

ಮುಂದಿನ ಸುದ್ದಿ
Show comments