Select Your Language

Notifications

webdunia
webdunia
webdunia
webdunia

ಭೂಕಂಪದ ಭಯ ಬೇಡ: ಭಾರತ ನಿಮ್ಮೊಂದಿಗಿದೆ ಎಂದ ರಾಜನಾಥ್

ಭೂಕಂಪದ ಭಯ ಬೇಡ: ಭಾರತ ನಿಮ್ಮೊಂದಿಗಿದೆ ಎಂದ ರಾಜನಾಥ್
ನವದೆಹಲಿ , ಸೋಮವಾರ, 27 ಏಪ್ರಿಲ್ 2015 (15:56 IST)
ನೇಪಾಳ ಹಾಗೂ ಭಾರತದಲ್ಲಿ ಭೂಕಂಪ ಸಂಭವಿಸಿರುವ ಪರಿಣಾಮ ಸಾಕಷ್ಟು ಪ್ರಮಾಣದ ಹಾನಿಯಾಗಿದ್ದು, ನೇಪಾಳದೊಂದಿಗೆ ಭಾರತವಿದೆ. ನೇಪಾಳದ ಭೂಕಂಪ ಸಂತ್ರಸ್ತರು ಭಯಪಡುವುದು ಬೇಡ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ನೇಪಾಳಿಗಳಿಗೆ ಇಂದು ಮನವಿ ಮಾಡಿದ್ದಾರೆ. 
 
ಲೋಕಸಭೆಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ನೇಪಾಳದಲ್ಲಿ ಭೂಕಂಪನದ ರುದ್ರತಾಂಡವ ಕಾಣಿಸಿಕೊಳ್ಳುತ್ತಿದ್ದು, ನೇಪಾಳದ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ 70 ಸಾವಿರಕ್ಕೂ ಅಧಿಕ ಮಂದಿ ನಲುಗಿದ್ದು, ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದರೆ ಇದರಿಂದ ನೇಪಾಳಿಗಳು ಕಂಗೆಡುವುದು ಬೇಡ. ಭಾರತ ನೇಪಾಳದೊಂದಿಗಿದ್ದು, ಶೀಘ್ರವೇ ರಕ್ಷಣಾ ಕಾರ್ಯಚರಣೆಯನ್ನು ಮುಗಿಸಲಿದೆ. ಅಲ್ಲದೆ ಸಂತ್ರಸ್ಥರಿಗೆ ಬದುಕಲು ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
 
ಬಳಿಕ, ಸಂತ್ರಸ್ತರಿಗಾಗಿ ಈಗಾಗಲೇ ವಿಶೇಷ ವಿಮಾನಗಳಲ್ಲಿ ಸಾಕಷ್ಟು ಸಾಮಾಗ್ರಿಗಳನ್ನು ಹೊತ್ತೊಯ್ಯಲಾಗುತ್ತಿದ್ದು, ಅಗತ್ಯಕ್ಕೂ ಮೀರಿ ಆಹಾರ ಹಾಗೂ ಔಷಧಿಯನ್ನು ರವಾನಿಸಲಾಗುತ್ತಿದೆ. ಅಲ್ಲದೆ ಭಾರತದ ಸೈನಿಕರು ತಮ್ಮ ಶಕ್ತಿ ಮೀರಿ ರಕ್ಷಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಭಾರತದ 3000ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ತಮ್ಮ ತಾಯ್ನಾಡಿಗೆ ತಲಸುಪಿಸುವ ಎಲ್ಲಾ ಕಾರ್ಯಗಳು ನಡೆಯುತ್ತಿವೆ ಎಂದರು. 
 
ಇನ್ನು ರಕ್ಷಣಾ ಕಾರ್ಯಾಚರಣೆಯ ಎಲ್ಲಾ ನೇತೃತ್ವವನ್ನು ಪ್ರಧಾನಿ ಮೋದಿ ಅವರೇ ವಹಿಸಿದ್ದು, ಭರದಿಂದ ಸಾಗಿದೆ. ನೇಪಾಳಿಗಳ ರಕ್ಷಣೆಗಾಗಿ ಬಿಹಾರ ಹಾಗೂ ಉತ್ತರ ಪ್ರದೇಶಗಳಿಂದ ಬಸ್‌ಗಳನ್ನೂ ಕೂಡ ಕಳುಹಿಸಲಾಗಿದೆ ಎಂದರು.
 
ಇದೇ ವೇಲೆ, ಭಾರತದಲ್ಲಿಯೂ ಭೂಕಂಪ ಸಂಭವಿಸಿದ್ದು, 300 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 72 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ವಾರಣಾಸಿಯಲ್ಲಿ ಸಂತ್ರಸ್ತರಿಗಾಗಿ ಶಿಬಿರವನ್ನು ತೆರೆಯಲಾಗಿದ್ದು, ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ದೇಶದಲ್ಲಿಯೂ ಕೂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ನೇತೃತ್ವವನ್ನು ಆಯಾ ರಾಜ್ಯ ಸರ್ಕಾರಗಳೇ ವಹಿಸಿವೆ ಎಂದರು. 
 
ಭೂಕಂಪನದ ಪರಿಣಾಮ ನೇಪಾಳದಲ್ಲಿ ಇಲ್ಲಿಯವರೆಗೂ 3250 ಮಂದಿ ಸಾವನ್ನಪ್ಪಿದ್ದು, 9000ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ. ಅಲ್ಲದೆ 70 ಸಾವಿರ ಮಂದಿ ತಮ್ಮ ನೆಲೆ ಕಲೆದುಕೊಂಡಿದ್ದು, ಬೀದಿಗಿಳಿದಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು. 

Share this Story:

Follow Webdunia kannada