Select Your Language

Notifications

webdunia
webdunia
webdunia
webdunia

ಜಿಲ್ಲಾಧಿಕಾರಿ ಜಿಯಾವುಲ್‌ಗೆ ಮಾದೇಗೌಡ ವಾರ್ನಿಂಗ್

ಜಿಲ್ಲಾಧಿಕಾರಿ ಜಿಯಾವುಲ್‌ಗೆ ಮಾದೇಗೌಡ ವಾರ್ನಿಂಗ್
ಮಂಡ್ಯ , ಶುಕ್ರವಾರ, 9 ಸೆಪ್ಟಂಬರ್ 2016 (15:43 IST)
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವ ಮೇಲೆ ಲಾಠಿಚಾರ್ಜ್ ಮಾಡಿರುವುದು ಸರಿಯಲ್ಲ. ಒಂದು ವೇಳೆ ಮತ್ತೊಮ್ಮೆ ಲಾಠಿಚಾರ್ಜ್ ಮಾಡಿದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕ್ತೇವೆ ಎಂದು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ಜಿಲ್ಲಾಧಿಕಾರಿ ಜಿಯಾವುಲ್‌ಗೆ ಎಚ್ಚರಿಸಿದ್ದಾರೆ.
 
ಕೆಆರ್‌ಎಸ್ ಡ್ಯಾಂ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ ಲಾಠಿಚಾರ್ಜ್ ಮಾಡುವ ಅಗತ್ಯವೇನಿತ್ತು? ಲಾಠಿಚಾರ್ಜ್ ಮಾಡಲು ನಿಮಗೆ ಅನುಮತಿ ಕೊಟ್ಟವರಾರು? ನಿಮ್ಮ ವರ್ತನೆ ಇದೇ ರೀತಿ ಮುಂದುವರಿದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.
 
ಕಾವೇರಿ ನೀರು ಹರಿಬಿಡುವುದನ್ನು ತಡೆಯಲು ರೈತರು ಪ್ರಯತ್ನಿಸುತ್ತಿದ್ದಾರೆ. ಕಾವೇರಿ ನದಿ ನಮ್ಮ ಜೀವನಾಡಿ. ಕಾವೇರಿ ತಾಯಿಯ ರಕ್ಷಣೆಗಾಗಿ ನಾವು ಸದಾ ಬದ್ಧರಾಗಿದ್ದೇವೆ ಎಂದು ಘೋಷಿಸಿದ್ದಾರೆ.
 
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತರು ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ಲಾಠಿಚಾರ್ಜ್ ಮಾಡುವುದರಿಂದ ರೈತರನ್ನು ರೊಚ್ಚಿಗೇಳಿಸುವಂತಾಗುತ್ತದೆ. ನಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಲ್ಲಿ ನಾವು ಹೊಣೆಗಾರರಲ್ಲ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ರಾಜ್ಯಗಳ ಸಿಎಂಗಳ ಸಭೆ ಕರೆಯಲು ಪ್ರಧಾನಿಗೆ ಸಿಎಂ ಪತ್ರ