Select Your Language

Notifications

webdunia
webdunia
webdunia
webdunia

ಡಿ.ಕೆ.ರವಿಯದ್ದು ಪ್ರೇಮ ಪ್ರಸಂಗ, ಹಂಡಿಭಾಗ್‌ರದ್ದು ಕಿಡ್ನಾಪ್ ಕೇಸ್, ಗಣಪತಿಯವರನ್ನು ಹುಚ್ಚರೆಂತಿದ್ದಾರೆ: ಕುಮಾರಸ್ವಾಮಿ

ಡಿ.ಕೆ.ರವಿಯದ್ದು ಪ್ರೇಮ ಪ್ರಸಂಗ, ಹಂಡಿಭಾಗ್‌ರದ್ದು ಕಿಡ್ನಾಪ್ ಕೇಸ್, ಗಣಪತಿಯವರನ್ನು ಹುಚ್ಚರೆಂತಿದ್ದಾರೆ: ಕುಮಾರಸ್ವಾಮಿ
ಬೆಂಗಳೂರು , ಶನಿವಾರ, 9 ಜುಲೈ 2016 (15:18 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೆಸರು ಕೇಳಿ ಬಂದಿದ್ದು, ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಸೂಚನೆ ನಾಚಿಗೇಡಿನ ಸಂಗತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
 
ದಕ್ಷ ಅಧಿಕಾರಿ ಡಿ.ಕೆ.ರವಿ ಮೃತಪಟ್ಟಾಗ ಪ್ರೇಮ ಪ್ರಸಂಗ ಎಂದ್ರು, ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ಕಿಡ್ನಾಪ್ ಕೇಸ್ ಎಂದ್ರು ಮತ್ತು ಆತ್ಮಹತ್ಯೆಗೆ ಶರಣಾಗಿರುವ ಮಂಗಳೂರು ಡಿವೈಎಸ್‌ಪಿ ಗಣಪತಿಯವರನ್ನು ಹುಚ್ಚರೆಂದು ಬಿಂಬಿಸಿರುವ ಸರಕಾರ ಇನ್ನು ಎಷ್ಟು ಮನೆಗಳನ್ನು ಹಾಳು ಮಾಡತ್ತೊ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ ಗುಡಗಿದ್ದಾರೆ.
 
ಭ್ರಷ್ಟಾಚಾರ ಬೀಜ ಬಿತ್ತಿದ್ದು ಬಿಜೆಪಿ, ಅದನ್ನು ಬೃಹದಾಕಾರವಾಗಿ ಬೆಳೆಸಿದ್ದು ಕಾಂಗ್ರೆಸ್. ರಾಜ್ಯ ಸರಕಾರ ಅಧಿಕಾರ ದುರುಪಯೋಗವನ್ನು ಬಿಡಬೇಕು. ಇಲ್ಲದಿದ್ದರೆ, ಜನರು ಬೀದಿಯಲ್ಲಿ ಓಡಾಡಿಸಿಕೊಂಡು ಹೋಡಿಯುತ್ತಾರೆ. ರಾಜ್ಯದ ಜನತೆ ಸರಕಾರದ ಭ್ರಷ್ಟಾಚಾರದ ಕುರಿತು ಹೋರಾಟ ನಡೆಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ಉದ್ವಿಗ್ನ;ಅಮರನಾಥ ಯಾತ್ರೆ ರದ್ದು