ಎಸ್. ನಾರಾಯಣ್ ತುಂಬಾ ಬಲವಂತ ಮಾಡಿದರು. ಅದಕ್ಕಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, 6-7 ತಿಂಗಳ ಹಿಂದೆ 20 ತಿಂಗಳ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಚಿತ್ರ ಮಾಡುತ್ತೇನೆಂದು ಹೇಳಿದ್ದರು. ಬೇರೆಯವರು ಟೀಕೆ ಮಾಡುತ್ತಾರೆ ಬೇಡವೆಂದು ಹೇಳಿದ್ದೆ. ನಾರಾಯಣ್ ತುಂಬಾ ಬಲವಂತ ಮಾಡಿದರು ಅದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ.
ಇದೇವೇಳೆ, ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಪಕ್ಷ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಾತುಕತೆ ಪ್ರಗತಿಯಲ್ಲಿದೆ. ಅವರು ಯಾವುದೇ ಒತ್ತಡಕ್ಕೆ ಮಣಿಯಲ್ಲ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಒಪ್ಪಂದ ವದಂತಿಗಳನ್ನ ಕುಮಾರಸ್ವಾಮಿ ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ