Webdunia - Bharat's app for daily news and videos

Install App

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದೆ ನನ್ನ ಸಹಕಾರದಿಂದ

ಸಂಪ್ರಿಯ
ಭಾನುವಾರ, 28 ಜೂನ್ 2026 (12:10 IST)
ಮೈಸೂರು: ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದದ್ದು ನನ್ನ ಬೆಂಬಲದಿಂದಲೇ. ಇನ್ನೂ ನಾನು ಸಚಿವನಾಗಲೂ ಕೂಡಾ ಅವರು ಸಹಾಯ ಮಾಡಿದ್ದಾರೆ.  ಕುಮಾರಪರ್ವ ಸಮಾವೇಶ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರಾವ ಕ್ಷೇತ್ರದಲ್ಲೂ ಇಲ್ಲಿಯಂತೆ ದೊಡ್ಡಮಟ್ಟದಲ್ಲಿ ನಡೆದಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಅವರು ಹೇಳಿದರು. 

ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪಕ್ಷ ಕಟ್ಟುವ ಶಕ್ತಿ ಕುಮಾರಸ್ವಾಮಿಗಿದೆ. ಡಿಎಸ್‌ ಉಳಿಸುವ ಕೆಲಸವನ್ನು ಅವರು ಮಾಡುತ್ತಾರೆ‌. ನನ್ನ ಜನ ಗಟ್ಟಿ ಇದ್ದಾರೆ, ನನ್ನ ಜೊತೆ ಸದಾ ನಿಲ್ಲುತ್ತಾರೆ ಎಂದು ಹೇಳಿದರು. 

ಜಿಟಿಡಿ ಎರಡೂ ಕಾಲನ್ನೂ ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,  ನನ್ನ ಬಗ್ಗೆ ಏನು ಹೇಳಿದ್ದಾರೆಯೋ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಗುರಿ. ಬೇರೆ ರಾಜಕಾರಣ ನನಗೆ ಗೊತ್ತಿಲ್ಲ. ಆ ಕಾರಣದಿಂದಲೇ ಜನರು ನನ್ನನ್ನು ಗೆಲ್ಲಿಸಿದ್ದಾರೆ. 2028ರ ಚುನಾವಣೆಯಲ್ಲೂ ನೀವೇ ಸ್ಪರ್ಧಿಸಬೇಕು, ನಿಮ್ಮ ಜೊತೆ ಇರುತ್ತೇವೆ ಎನ್ನುತ್ತಿದ್ದಾರೆ. ಜನರು ಏನು ಹೇಳುತ್ತಾರೆಯೋ ಅದನ್ನೇ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಅಂದು ನಾನು ಸಿದ್ದರಾಮಯ್ಯರ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಹೇಳಿದ್ದರು. ನಾನು ಆ ಪಕ್ಷಕ್ಕೆ ಹೋಗಿದ್ದೇನೆಯೇ, ಡಿ.ಕೆ. ಶಿವಕುಮಾರ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿಲ್ಲ, ಚರ್ಚಿಸಿಯೂ ಇಲ್ಲ. ಎಲ್ಲ ಕ್ಷೇತ್ರಗಳಂತೆಯೇ ನನ್ನ ಕ್ಷೇತ್ರದ ಅಭಿವೃದ್ಧಿಗೂ ₹ 25 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ ಎಂದು ಹೇಳಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BRICS ಸಮ್ಮೇಳನದಲ್ಲಿ ಸಸ್ಯಾಹಾರ ಊಟವೇ ಯಾಕಿದೆ: ಪ್ರಶ್ನೆ ಮಾಡಿದ ರಾಹುಲ್ ಗಾಂಧಿ

ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ: ಸಿಎಂ ಡಿಕೆ ಶಿವಕುಮಾರ್‌

ಗಣೇಶೋತ್ಸವಕ್ಕೆ ಅಡ್ಡಿಪಡಿಸುವುದು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ: ಬಿವೈ ವಿಜಯೇಂದ್ರ

ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿ ಭಾರತದ ಮುನ್ನಡೆಸಿದ ರೀತಿಗೆ ದ.ಆ ಅಧ್ಯಕ್ಷ ಸಿರಿಲ್ ಮೆಚ್ಚುಗೆ

ಪತ್ನಿ ಜತೆಗಿನ‌ ಜಗಳಕ್ಕೆ ಠಾಣೆಗೆ ಬಂದವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿ ಆತಂಕ ಸೃಷ್ಟಿ

ಮುಂದಿನ ಸುದ್ದಿ
Show comments