Daily Horoscope
✕

ಮತ್ತೆ ಕಮಲ ಹಿಡಿಯಲಿದ್ದಾರಾ ಕೆ.ಎಸ್. ಈಶ್ವರಪ್ಪ: ಸುಳಿವು ನೀಡಿದ ಮಾಜಿ ಸಚಿವ

ಕೃಷ್ಣವೇಣಿ ಕೆ
ಗುರುವಾರ, 8 ಅಕ್ಟೋಬರ್ 2026 (11:29 IST)
ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ರಾಜ್ಯದ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಅವರು ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳುವ ಸ್ಪಷ್ಟ ಸುಳಿವು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
 
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಮ್ಮನ್ನು ಭೇಟಿಯಾಗಿ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. "ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದೇ ಸಂಘ ಪರಿವಾರ. ಹಾಗಾಗಿ ಅವರ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
 
ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ:
ಪಕ್ಷ ಸೇರ್ಪಡೆ ನಿರ್ಧಾರಕ್ಕೂ ಮುನ್ನ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಈಶ್ವರಪ್ಪ ಮೂರು ಹಂತಗಳ ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ. 'ರಾಷ್ಟ್ರಭಕ್ತರ ಬಳಗ'ದ ಪದಾಧಿಕಾರಿಗಳು ಸೇರಿದಂತೆ ಶಿವಮೊಗ್ಗದ ಸುಮಾರು 50 ಪ್ರಮುಖ ಮುಖಂಡರೊಂದಿಗೆ ಅವರು ಚರ್ಚಿಸಿದ್ದಾರೆ.   
 
ಈ ವೇಳೆ ಕಾರ್ಯಕರ್ತರು, "ಕಳೆದ ಬಾರಿಯಂತೆ ಆತುರದ ನಿರ್ಧಾರ ಕೈಗೊಂಡು ಮೋಸ ಹೋಗಬೇಡಿ. ಈ ಬಾರಿ ಹೈಕಮಾಂಡ್ ಅಥವಾ ಸಂಘದ ಹಿರಿಯ ನಾಯಕರಿಂದ ಸ್ಪಷ್ಟ ಭರವಸೆ ಸಿಕ್ಕರೆ ಮಾತ್ರ ಪಕ್ಷಕ್ಕೆ ಮರಳಿ" ಎಂದು ಸಲಹೆ ನೀಡಿದ್ದಾರೆ.
 
ಚುನಾವಣೆಗೆ ಸ್ಪರ್ಧಿಸುವುದು ಖಚಿತ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಅಥವಾ ತಮ್ಮ ಪುತ್ರ ಕೆ. ಇ. ಕಾಂತೇಶ್ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸ್ಪಷ್ಟಪಡಿಸಿರುವ ಈಶ್ವರಪ್ಪ, ಇತರ ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದಲೂ ತಮಗೆ ಆಹ್ವಾನ ಬಂದಿರುವುದಾಗಿ ಅವರು ಹೇಳಿದ್ದಾರೆ.
 
ಇನ್ನು ಮುಂದಿನ ಎಂಟು ದಿನಗಳಲ್ಲಿ ಬೆಂಬಲಿಗರೊಂದಿಗೆ ಮತ್ತಷ್ಟು ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಈಶ್ವರಪ್ಪ ತಿಳಿಸಿದ್ದು, ಅವರ 'ಘರ್ ವಾಪಸಿ' ಬಿಜೆಪಿ ಹೈಕಮಾಂಡ್‌ನ ಯಾವ ನಿಲುವಿನ ಮೇಲೆ ಆಧಾರಿತವಾಗಿರುತ್ತದೆ ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿದ್ಯುತ್ ತಂತಿ ಜೋಡಿಸುವಾಗ ಭೀಕರ ದುರಂತ, ನರಳಾಡಿ ಪ್ರಾಣ ಬಿಟ್ಟ ಯುವಕ: ಶಾಕಿಂಗ್ Video

ಸುಳ್ಯದಲ್ಲಿ ತೆರೆದ ಚರಂಡಿಗೆ ಬಿದ್ದ ಮಗು, ಬದುಕಿದ್ದೇ ಪವಾಡ: Video

ಬದರೀನಾಥದಲ್ಲಿ ಪವಾಡ: ಶ್ರೀ ರಾಮ್ ಜಪ ಕೇಳಿ ಮಹಿಳೆಯ ಮಡಿಲಿಗೆ ಬಂದು ಮೈಮರೆತ ಕೋತಿ Video

ನಾರಾಯಣನ ರೂಪದಲ್ಲಿ ನಂದಿಯೇ ಬಂತು..ಪವಾಡ ಮಾಡಿದ ಗೂಳಿ: ನಂಬಲಸಾಧ್ಯ ಘಟನೆಯಿದು Video

ಪ್ರಿಯಾಂಕಾ ವಾದ್ರಾ ತಳ್ಳಿದ್ದಕ್ಕೆ ಮೊಣಕೈಯಲ್ಲಿ ನೂಕಿದ ಮಹಿಳಾ ಪೊಲೀಸ್ ಅಧಿಕಾರಿ: Viral video

ಮುಂದಿನ ಸುದ್ದಿ
Show comments