ಕೆಆರ್‌ಎಸ್‌ ಮೂರನೇ ಬಾರಿ ಭರ್ತಿ, ನಮ್ಮ ಸರ್ಕಾರದ ಮೇಲೆ ವರುಣನ ಕೃಪೆಯಿದೆ ಎಂದ ಡಿಕೆಶಿ

Sampriya
ಸೋಮವಾರ, 27 ಅಕ್ಟೋಬರ್ 2025 (16:10 IST)
Photo Credit X
ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಈ ಬಾರೀ ನದಿಗಳು ತುಂಬಿ ಹರಿಯುತ್ತಿದೆ. ಒಂದೇ ವರ್ಷದಲ್ಲಿ 3ನೇ ಬಾರಿ ಕೃಷ್ಣ ರಾಜನಗರ ಜಲಾಶಯ ಭರ್ತಿಯಾಗಿದೆ. ನಮ್ಮ ಸರ್ಕಾರದ ಮೇಲೆ ವರುಣನ ಕೃಪೆಯಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ಪೋಟೋವನ್ನು ಶೇರ್ ಮಾಡಿ, ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ.  

ಕೆಆರ್ ಎಸ್ ವರ್ಷದಲ್ಲಿ 3ನೇ ಬಾರಿ ಭರ್ತಿ!

ನಮ್ಮ ಸರ್ಕಾರದ ಮೇಲೆ ವರುಣನ ಕೃಪೆಯಿದೆ.

ಕಾವೇರಿ ಈಗ ಸಂತೃಪ್ತಿಯಾಗಿ ಮೈದುಂಬಿ ಹರಿಯುತ್ತಿದ್ದಾಳೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ಇತಿಹಾಸ ನಿರ್ಮಾಣವಾಗಿರುವುದು ಮಾತ್ರವಲ್ಲದೆ ಬೆಂಗಳೂರಿಗೆ ಬೇಸಿಗೆಯ ನೀರಿನ ಕೊರತೆ ಕೂಡ ಕಣ್ಮರೆಯಾಗುತ್ತದೆ. 

ಬೀದರ್ ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬುಡಕಟ್ಟು ಜನರಿಗೆ ಕಳಪೆ ಆಹಾರ, ಏನಾದ್ರೂ ಆದ್ರೆ ಯಾರು ಹೊಣೆ: ಬಿವೈ ವಿಜಯೇಂದ್ರ

ಹೌದಪ್ಪಾ ಡಿಕೆಶಿ..ಕುಮಾರಣ್ಣನದ್ದು ಖಾಲಿ ಕೈ, ನೀವು ಲೂಟೇಶಿ: ಜೆಡಿಎಸ್ ಟೀಕೆ

ಅನುದಾನ ಬಳಕೆ ಇಲ್ಲ, ಅಭಿವೃದ್ದಿ ಆಗಿಲ್ಲ, ಆರ್ ಎಸ್ಎಸ್ ಜಪ ಮಾಡ್ತಿದ್ದಾರೆ: ಆರ್ ಅಶೋಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments