Select Your Language

Notifications

webdunia
webdunia
webdunia
webdunia

ಕೃಷ್ಣಾ ನ್ಯಾಯಾಧಿಕರಣ ಐ-ತೀರ್ಪು ಪ್ರಕಟಿಸಿದ ಸುಪ್ರೀಂ

ಕೃಷ್ಣಾ ನ್ಯಾಯಾಧಿಕರಣ ಐ-ತೀರ್ಪು ಪ್ರಕಟಿಸಿದ ಸುಪ್ರೀಂ
ಬೆಂಗಳೂರು , ಶುಕ್ರವಾರ, 29 ಆಗಸ್ಟ್ 2014 (12:28 IST)
ಕೃಷ್ಣಾ ನ್ಯಾಯಾಧಿಕರಣ ಐ-ತೀರ್ಪಿನ ವಿಚಾರಣೆ ನಡೆಸಿದ ಸುಪ್ರೀಂ ಕೊರ್ಟ್‌‌ ನಾಲ್ಕು ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಗೆಜೆಟ್‌ ಹೋರಡಿಸಲು ಆದೇಶ ನೀಡಿದೆ. ಈ ಕುರಿತು ಮಹರಾಷ್ಟ್ರ ಸರಕಾರ ಅರ್ಜಿ ಅಲ್ಲಿಸಿತ್ತು. ಮಹರಾಷ್ಟ್ರ ಸರ್ಕಾರದ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತಿರ್ಮಾನಕ್ಕೆ ಬಂದಿದೆ. 
 
ತೆಲಂಗಾಣವನ್ನು ರಾಜ್ಯವೆಂದು ಸುಪ್ರೀಂ ಕೋರ್ಟ್‌ ಪರಿಗಣಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಸಹಿತ ನಾಲ್ಕು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ತೆಲಂಗಾಣಕ್ಕೆ ನೋಟಿಸು ಜಾರಿ ಮಾಡಿದೆ. 
 
ಈ ಕುರಿತು ಗೆಜೆಟ್‌ ಹೊರಡಿಸಬೇಕು. ಮತ್ತು ಕೋರ್ಟ್‌‌ನ  ನೋಟಿಸಿಗೆ ಉತ್ತರ ನೀಡಬೇಕು. ಈ ಉತ್ತರ ನಾಲ್ಕು ದಿನಗಳ ಒಳಗಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಗಡುವು ನೀಡಿದೆ ಎಂದು ಮೂಲಗಳು ತಿಳಿಸಿವೆ. 
 
 
 
 
 

Share this Story:

Follow Webdunia kannada