Select Your Language

Notifications

webdunia
webdunia
webdunia
webdunia

ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ವಿಚಾರ: ನ್ಯಾಯಾಲಯದಲ್ಲಿ ಎಜಿ ಹೇಳಿಕೆ

ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ವಿಚಾರ: ನ್ಯಾಯಾಲಯದಲ್ಲಿ ಎಜಿ ಹೇಳಿಕೆ
ಬೆಂಗಳೂರು , ಸೋಮವಾರ, 2 ಮಾರ್ಚ್ 2015 (15:56 IST)
ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಅಟಾರ್ನಿ ಜನರಲ್ ಪ್ರೊ.ರವಿವರ್ಮಕುಮಾರ್ ಅವರು ಈ ಸಂಬಂಧ ನಿಯಮಾವಳಿಯನ್ನು ರೂಪಿಸುವ ಅಗತ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. 
 
ವಿಚಾರಣಾ ವೇಳೆ ಮಾತನಾಡಿದ ಅವರು, ಯುಪಿಎಸ್ ಸಿ ಸೇರಿದಂತೆ ರಾಷ್ಟ್ರದ ಯಾವುದೇ ರಾಜ್ಯಕ್ಕೆ ಸೇರಿದ ಲೋಕಸೇವಾ ಆಯೋಗಗಳಿಗೂ ಕೂಡ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ನೂತನ ನಿಯಮಾವಳಿಗಳನ್ನು ರೂಪಿಸಿ ಏಕರೂಪದ ಅಧ್ಯಕ್ಷರ ನೇಮಕಾತಿಯನ್ನು ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯರಿಲ್ಲದೆ ಇರುವುದರಿಂದ ಸಮಸ್ಯೆ ಉದ್ಭವಿಸಿದ್ದು, ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗಾಗಿ ಏಕರೂಪದ ನಿಯಮಾವಳಿಯನ್ನು ಜಾರಿಗೆ ತರುವ ಅವಶ್ಯವಿದೆ ಎಂದರು. 
 
ಇನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಸುದರ್ಶನ್ ಅವರನ್ನು ನೇಮಕಗೊಳಿಸುವಂತೆ ಸರ್ಕಾರ ಈ ಹಿಂದೆಯೇ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಸುದರ್ಶನ್ ಬಿಡಿಎ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎರಡು ಸೈಟುಗಳನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರಾಕರಿಸಲಾಗಿತ್ತು. 

Share this Story:

Follow Webdunia kannada