Webdunia - Bharat's app for daily news and videos

Install App

ಸರಕಾರಕ್ಕೆ ಮುಖಭಂಗ: ಕೆಪಿಎಸ್‌ಸಿ ರದ್ದತಿ ಆದೇಶಕ್ಕೆ ಕೋರ್ಟ್ ತಡೆ

Webdunia
ಗುರುವಾರ, 28 ಆಗಸ್ಟ್ 2014 (13:45 IST)
2011ರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ  ಮಧ್ಯಾಂತರ ತಡೆ ನೀಡಿದೆ.
 
ಕೆಎಟಿ ನ್ಯಾಯಮೂರ್ತಿ ಮೂಸೆ ಕುಂಞ ನಾಯರ್‌ ಮೂಲೆ ಹಾಗೂ  ಸದಸ್ಯ ಅಭಿಜಿತ್‌ ದಾಸ್‌ಗುಪ್ತ ಅವರಿದ್ದ ವಿಭಾಗೀಯ ಪೀಠವು ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.
 
2011ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನೇಮಕಗೊಂಡಿದ್ದ 362 ಜನರಲ್ಲಿ ದೇವ­ರಾಜ್‌ ಹಾಗೂ ಇತರ 159 ಜನರು ಈ ಮೇಲ್ಮನವಿ ಸಲ್ಲಿಸಿದ್ದಾರೆ. ಬುಧವಾರ ವಿಚಾರಣೆ ನಡೆಸಿದ  ನ್ಯಾಯಪೀಠ, ಸರ್ಕಾರ ಸೆಪ್ಟೆಂಬರ್ 19ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
 
ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ನಂಜುಂಡರೆಡ್ಡಿ ಹಾಜರಾಗಿ,   ‘2011ರಲ್ಲಿ ಆಯ್ಕೆ­ಯಾಗಿದ್ದ ಗೆಜೆಟೆಡ್‌
 
ಪ್ರೊಬೇಷನರಿ ಅಧಿಕಾರಿಗಳ ಪಟ್ಟಿ­ಯನ್ನು ರಾಜ್ಯ ಸರ್ಕಾರವು 2014ರ ಆಗಸ್ಟ್‌ 14ರಂದು ಹಿಂದಕ್ಕೆ ಪಡೆದಿದೆ. ಇದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ್ದರಿಂದ ಇದು  ಸಂವಿಧಾನದ 16ನೇ ವಿಧಿಯ (ಸಾರ್ವಜನಿಕ ಉದ್ಯೋಗ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗಿದೆ. ಇದ­ರಿಂದಾಗಿ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿದ್ದ ಪ್ರಾಮಾಣಿಕ ಮತ್ತು ಅರ್ಹತೆ ಆಧಾ­ರ­ದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ.
 
ಅಂತೆಯೇ ಸರ್ಕಾರದ ಈ ನಿರ್ಧಾರ ಗೆಜೆಟೆಡ್‌ ಪ್ರೊಬೇಷನರ್ಸ್‌ ಅಧಿನಿಯಮ–1997ರ ನಿಯಮ 11 (3)ಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.
 
ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು ಸರ್ಕಾರ ಹೊಸ ನೇಮಕಾತಿಗಾಗಿ ಯಾವುದೇ ಅಧಿಸೂಚನೆ ಹೊರಡಿ­ಸ­ಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments