ಬಾಡಿಗೆ ವಿಚಾರವಾಗಿ ವಿದೇಶಿ ಪ್ರಜೆಯೊಂದಿಗೆ ಕಿರಿಕ್

Webdunia
ಭಾನುವಾರ, 10 ಅಕ್ಟೋಬರ್ 2021 (17:17 IST)
ಬಾಡಿಗೆ ವಿಚಾರವಾಗಿ ವಿದೇಶಿ ಪ್ರಜೆಯೊಂದಿಗೆ ಕಿರಿಕ್ ಮಾಡಿಕೊಂಡು ಮೊಬೈಲ್ ಕಸಿದು ಪರಾರಿಯಾಗಿದ್ದ ಆಟೋಚಾಲಕನನ್ನ ಬೈಯ್ಯಪ್ಪನಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಶರತ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 6 ರಂದು ಆಸ್ಟ್ರೇಲಿಯಾ ಪ್ರಜೆ ಗ್ರೇ ಜಾನ್ ನ್ಯೂಮನ್ ಎಂಬಾತ ಚರ್ಚ್ ಸ್ಟ್ರೀಟ್ ನಿಂದ ಸಿವಿ ರಾಮನ್ ನಗರಕ್ಕೆ ಆಟೋ ರಿಕ್ಷಾ ಬುಕ್ ಮಾಡಿದ್ರು. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ ಶರತ್ 200 ರೂಪಾಯಿ ಕೇಳಿದ್ದು, ಆಸ್ಟ್ರೇಲಿಯಾ ಪ್ರಜೆ ಗ್ರೇ ಜಾನ್ ನ್ಯೂಮನ್ ಸಹ ಒಪ್ಪಿಗೆ ಸೂಚಿಸಿದ್ದನಂತೆ. ಆದ್ರೆ, ಮಾರ್ಗ ಮಧ್ಯೆ ಹಲಸೂರು ಬಳಿ ಆಟೋ ಪಂಕ್ಚರ್ ಆಗಿದ್ದು, ಪಂಕ್ಚರ್ ಹಾಕಿಸಿದ ಬಳಿಕ ಗ್ರೇ ಜಾನ್ ನನ್ನ ಹೇಳಿದ ಕಡೆ ಡ್ರಾಪ್ ಮಾಡಲಾಗಿತ್ತು ಆದ್ರೆ, ಆ ವೇಳೆ ಆಸ್ಟ್ರೇಲಿಯಾ ಪ್ರಜೆ ಮಾತನಾಡಿದ್ದ 200 ರೂಪಾಯಿ ಜೊತೆಗೆ 100 ರೂಪಾಯಿ ಟಿಪ್ಸ್ ಸಹ ನೀಡಿದ್ದಾನೆ. ಆದ್ರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಶರತ್ 300 ರೂ ಬದಲಿಗೆ 700 ರೂಪಾಯಿ ಡಿಮ್ಯಾಂಡ್ ಮಾಡಿದ್ದಾನೆ. ಅಷ್ಟು ಕೊಡಲು ಆಸ್ಟ್ರೇಲಿಯಾ ಪ್ರಜೆ ಒಪ್ಪದಿದ್ದಾಗ  ಆತನ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕ ಶರತ್ ಹಲ್ಲೆ ನಡೆಸಿ, ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದ. ಈ ಸಂಬಂಧ ಗ್ರೇ ಜಾನ್ ನ್ಯೂಮನ್ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ರು ಆರೋಪಿಯನ್ನ ಬಂಧಿಸಿ,, ಕಸಿದು ಪರಾರಿಯಾಗಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡಕ್ಕೂ ಸೈ: ರಾಹುಲ್ ಗಾಂಧಿ ವ್ಯಂಗ್ಯ

ಮುಂದಿನ ಸುದ್ದಿ
Show comments