Webdunia - Bharat's app for daily news and videos

Install App

ಕೆಸಿ ಜನರಲ್ ಆಸ್ಪತ್ರೆಯ ಮಕ್ಕಳ ವಾರ್ಡ್ ಭರ್ತಿ

Webdunia
ಬುಧವಾರ, 6 ಜುಲೈ 2022 (16:42 IST)
ನಗರದ ಆಸ್ಪತ್ರೆಗಳಲ್ಲಿ ಈಗ  ಎಲ್ಲಿ ನೋಡಿದ್ರು ಬೇರೆ ಮಕ್ಕಳೇ ಕಾಣ್ತಾರೆ. ಮಕ್ಕಳು ಕೆಮ್ಮು ಜ್ವರ, ಶೀತದಿಂದ ಬಾಳಲುತ್ತಿದ್ದು, ಆಸ್ಪತ್ರೆಯಲ್ಲಿ ಕಾಲಿಡಲಾಗದ ಮಟ್ಟಿಗೆ ಮಕ್ಕಳು ತುಂಬಿದ್ದಾರೆ. ನಗರದ ಕೆಲವೊಂದು ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಕೂಡ ಕಷ್ಟವಾಗೋಗಿದೆ. ಹೀಗಾಗಿ ಪೋಷಕರು ಆತಂಕ ಶುರುವಾಗಿದೆ.ನಗರದ ಆಸ್ಪತ್ರೆಗಳಲ್ಲಿ ಮಕ್ಕಳ ಪ್ರಕರಣ ಹೆಚ್ಚಾಗ್ತಿದೆ. ಮಕ್ಕಳು ಕೆಮ್ಮು, ಜ್ವರ , ಶೀತದಿಂದ ಬಾಳುತ್ತಿದ್ದು, ಎಲ್ಲ ಕೊರೊನಾ ಲಕ್ಷಣವನ್ನೇ ಹೊಂದಿದ್ದಾರೆ. ಆದ್ರೆ ಕೋವಿಡ್ ಪರೀಕ್ಷೆಗೆ ಮಕ್ಕಳನ್ನ ಒಳಪಡಿಸಿದಾಗ ಮಕ್ಕಳಿಗೆ ಕೊರೊನಾ ಬದಲಿಗೆ ಬೇರೆ ಬೇರೆ ರೋಗಗಳು ಉಲ್ಬಣಿಸುತ್ತಿರುವುದು ಗೊತ್ತಾಗ್ತಿದೆ. ಆದ್ರಲ್ಲೂ ಈಗ ಮಕ್ಕಳಲ್ಲಿ ನ್ಯೂಮೋನಿಯಾ , ಡೆಂಘ್ವಿ ಫೀವರ್ ಹೆಚ್ಚಾಗ್ತಿದೆ. ಕೊರೊನಾ ಪ್ರಕರಣ ಹೆಚ್ಚಾಗುವ ಟೈಮ್ ನಲ್ಲಿ ಈ ಡೆಂಘ್ವಿ ಜ್ವರ ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಆಸ್ಪತ್ರೆಯಲ್ಲಿ ಈಗ ಬೆಡ್ ಸಿಗುವುದಕ್ಕೂ ಕೂಡ ಪರದಾಡುವಂತಾಗಿದೆ. ಕೆಸಿ ಜನರಲ್ ಆಸ್ಪತ್ರೆಯಂತೂ ಮಕ್ಕಳಿಂದ ತುಂಬಿ ಹೋಗಿದೆ. ಮಕ್ಕಳ ಕೇಸ್ ಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಹೊರೆತು ಕಡಿಮೆ ಮಾತ್ರ ಆಗ್ತಿಲ್ಲ.ಒಂದು ಕಡೆ ಕೊರೊನಾ ಹೆಚ್ಚಾಗ್ತಿದೆ ಮತ್ತೊಂದು ಕಡೆ ಮಕ್ಕಳಲ್ಲಿ ಹಲವು ರೋಗ-ರುಜ್ಜಿನೆಗಳು ಕಾಣಿಸಿಕೊಳ್ತಿದೆ. ಇನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗಳ ಮಕ್ಕಳ ವಿಭಾಗದಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಎಲ್ಲ ಕೋವಿಡ್ ಲಕ್ಷಣ ಕಂಡುಬರುತ್ತಿರುವದರಿಂದ ಮಕ್ಕಳಿಗೆ ಲಸಿಕೆ ಹಾಕಿಸಿಲ್ವಾಲ್ಲ ಅಂತಾ ಪೋಷಕರಂತೂ ಭಯಭಿತಗೊಂಡಿದ್ದಾರೆ. ಆದ್ರೆ ಮಕ್ಕಳ ತಜ್ಷರು ಮಾತ್ರ ಈಗ ಮಳೆಗಾಲವಾದರಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಭಯಪಾಡುವ ಅವಶ್ಯಕತೆ ಇಲ್ಲ ಅಂತಿದ್ದಾರೆ. ಇನ್ನು ಸಾಮಾನ್ಯವಾಗಿ ಜೂನ್ -ಜುಲೈ ನ್ಯೂಮೋನಿಯಾ , ಜ್ವರ ಹೆಚ್ಚಾಗುತ್ತೆ. ಈಗ ಡೆಂಘ್ವಿ ಪ್ರಕರಣ ಶೇ 30 ರಿಂದ 40 ರಷ್ಟು ಹೆಚ್ಚಾಗಿದ್ದು. ಇನ್ಮುಂದೆ  ಆಗಸ್ಟ್ , ಸೆಪ್ಟಂಬರ್ ನಲ್ಲಿ  ಮತ್ತಷ್ಟು ಪ್ರಕರಣ ಹೆಚ್ಚಾಗುವ  ಸಾಧ್ಯತೆ ಇದೆ ಎಂದು ಕೆ ಸಿ ಜನರಲ್ ಆಸ್ಪತ್ರೆಯ ಮಕ್ಕಳ ತಜ್ಷ ರಘುನಂದನ್ ಹೇಳಿದ್ದಾರೆ.
 ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಈಗಾಗಲ್ಲೇ ಮಕ್ಕಳ ವಾರ್ಡ್ ಭರ್ತಿಯಾಗಿದ್ದು, ಪೋಷಕರಂತೂ ವಾರ್ಡ್ ಭರ್ತಿಯಾಗಿರುವಕ್ಕೆ ಸುಸ್ತಾಗಿದ್ದಾರೆ. ನಿತ್ಯ ದಿನದಿಂದ ದಿನಕ್ಕೆ ಕೇಸಸ್ ಹೆಚ್ಚಾಗ್ತಿದ್ದು, ಆಡ್ಮೀಟ್ ಆಗುವ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಡಿಸ್ಚಾರ್ಜ್ ಆಗ್ತಿದಂತೆ ಆಡ್ಮೀಟ್ ಆಗುವ ಪ್ರಕರಣ ಹೆಚ್ಚಾಗ್ತಿದೆ. ಹೀಗಾಗಿ ಪೋಷಕರು ಆತಂಕಗೊಂಡಿದ್ದಾರೆ. ಡೆಂಘ್ವಿ ಜ್ವರ ಹೆಚ್ಚಾಗಿರುವುದಕ್ಕೆ ಪೋಷಷಕರು ಆತಂಕಕ್ಕೆ ಹೀಡಾಗಿದ್ದಾರೆ. ಇನ್ನು ಪೋಷಕರು ಇನ್ಮುಂದೆ ಎಚ್ಚರವಹಿಸಬೇಕು . ತಮ್ಮ ಮಕ್ಕಳನ್ನ ಹುಷರಾಗಿ ನೋಡಿಕೊಳ್ಳಬೇಕು . ಇಲ್ಲವಾದ್ರೆ ಮಕ್ಕಳ ಸ್ಥಿತಿ ಶೋಚನೀಯವಾಗಲಿದೆ.ಪುಟ್ಟ ಮಕ್ಕಳನ್ನ ಎಷ್ಟು ಜೋಪನವಾಗಿ ನೋಡಿಕೊಂಡ್ರು ಕಡಿಮೆನ್ನೇ . ಅವರಿಗೆ ಸ್ವಲ್ಪ ಜ್ವರ ಬಂದ್ರೆ ತಡೆದುಕೊಳ್ಳಲು ಶಕ್ತಿ ಇರಲ್ಲ . ಅಂತಾದ್ರಲ್ಲಿ ಈಗ ಡೆಂಘ್ವಿ ಪ್ರಕರಣ ಹೆಚ್ಚಾಗ್ತಿದೆ. ಆದಷ್ಟು ಮನೆ ಅಕ್ಕಪಕ್ಕ ಶುಚಿತ್ವ ಕಾಪಾಡಿಕೊಳ್ಳಿ. ಮಕ್ಕಳನ್ನ ಸುರಕ್ಷಿತವಾಗಿ ನೋಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments