Webdunia - Bharat's app for daily news and videos

Install App

ಕಾವೇರಿ ಬ್ಯಾಂಕ್ ಕಳ್ಳತನ ಪ್ರಕರಣ: ತನಿಖೆಗಾಗಿ 5 ತಂಡ ರಚನೆ

Webdunia
ಮಂಗಳವಾರ, 27 ಜನವರಿ 2015 (14:01 IST)
ಜಿಲ್ಲೆಯ ಚೆನ್ನರಾಯಪಟ್ಟಣದ ಹಿರಿಸಾವೆಯಲ್ಲಿನ ಬ್ಯಾಂಕ್ ಲೂಟಿ ಪ್ರಕರಣವನ್ನು ಭೇಧಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದ್ದು, ತನಿಖೆಗಾಗಿ ಇಬ್ಬರು ಎಎಸ್‌ಪಿ ಹಾಗೂ ಐವರು ಇನ್ಸ್ಪೆಕ್ಟರ್ ಗಳಿರುವ 5 ತಂಡವನ್ನು ರಚಿಸಿದೆ. 
 
ಇಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ನಿನ್ನೆ ನಡೆದಿದ್ದ ಲೂಟಿ ಪ್ರಕರಣದಲ್ಲಿ 6ಕೋಟಿ ಚಿನ್ನ ಹಾಗೂ 14 ಕೋಟಿ ನಗದು ಹಣವನ್ನು ದೋಚಿದ್ದ ಕಳ್ಳರು, ಸಿಸಿಟಿವಿ ಹಾಗೂ ಪಂಪ್ಯೂಟರ್‌ಗಳೆಲ್ಲವನ್ನೂ ಧ್ವಂಸಗೊಳಿಸಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಈ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. 
 
ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಇಂತಹ ಕೃತ್ಯಗಳು ನೆರೆಯ ಜಿಲ್ಲೆಗಳಲ್ಲಿಯೂ ನಡೆದಿದ್ದು, ಇದನ್ನೂ ಕೂಡ ಆ ಕೃತ್ಯಗಳ ತಂಡವೇ ಎಸಗಿರಬಹುದು ಎಂದಿದ್ದು, ಆರೋಪಿಗಳು ಮಂಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಮೂಲದವರಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments