ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತ್​ ಹತ್ಯೆ

Webdunia
ಶುಕ್ರವಾರ, 13 ಮೇ 2022 (20:12 IST)
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‍ನಲ್ಲಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ನಡೆದಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ.ಒಮರ್ ಅಬ್ದುಲ್ಲಾ ಅವರು, ರಾಹುಲ್ ಭಟ್ ಮೇಲಿನ ಹಂತಕ ಉಗ್ರಗಾಮಿ ದಾಳಿಯನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರನಾಗಿದ್ದ ರಾಹುಲ್ ಅವರ ಮೇಲೆ ದಾಳಿ ನಡೆಸಲಾಯಿತು. ಈ ಹತ್ಯೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಇದು ಮುಂದುವರಿಯುತ್ತೆ. ಇದರಿಂದ ಜಮ್ಮು-ಕಾಶ್ಮೀರದಲ್ಲಿ ಭಯದ ಭಾವನೆ ಬೆಳೆಯುತ್ತ ಹೋಗುತ್ತೆ. ರಾಹುಲ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಬರೆದುಕೊಂಡಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ರಾಹುಲ್ ಭಟ್ ರ ಬರ್ಬರ ಹತ್ಯೆಯನ್ನ ಖಂಡಿಸಿದ್ದಾರೆ.ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಸರ್ಕಾರಿ ನೌಕರಾಗಿದ್ದರು. ಚದೂರ ಪ್ರದೇಶದಲ್ಲಿನ ಅವರ ಕಚೇರಿಯಲ್ಲಿಯೇ ಭಯೋತ್ಪಾದಕರು ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಫಲಕಾರಿಯಾಗದೆ ಪ್ರಾಣ ಬಿಟ್ಟರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments