Daily Horoscope
✕

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮತ್ತೆ ಮಳೆ ಇದೆಯೇ ಇಲ್ಲಿದೆ ವರದಿ

Krishnaveni K
ಮಂಗಳವಾರ, 21 ಜನವರಿ 2025 (09:20 IST)
ಬೆಂಗಳೂರು: ಮೊನ್ನೆಯಷ್ಟೇ ದಿಡೀರ್ ಆಗಿ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು. ಇದೀಗ ಮತ್ತೆ ಸದ್ಯದಲ್ಲೇ ಮಳೆಯಾಗುವ ಸೂಚನೆಯಿದೆಯೇ ಎಂಬ ಪ್ರಶ್ನೆಗೆ ಹವಾಮಾನ ಇಲಾಖೆ ವಿವರಣೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಮೊನ್ನೆ ಮಳೆಯಾಗಿತ್ತು. ನಿನ್ನೆ ಕೂಡಾ ಮಳೆಯಾಗುವ ಸೂಚನೆಯಿತ್ತಾದರೂ ಬಳಿಕ ಸುಳ್ಳಾಗಿದೆ. ನಿನ್ನೆಯಿಡೀ ಶುಭ್ರ ಆಕಾಶವಿತ್ತು.

ಇದೀಗ ಹವಾಮಾನ ಇಲಾಖೆ ವರದಿ ಪ್ರಕಾರ ಜನವರಿ 25 ರವರೆಗೆ ಮಳೆಯಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಜನವರಿ 25 ರವರೆಗೂ ರಾಜ್ಯದಲ್ಲಿ ತೀವ್ರ ಚಳಿ, ಒಣ ಹವೆ ಮುಂದುವರಿಯಲಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿಯವರೆಗೆ ಇರಲಿದೆ ಎಂದು ಹೇಳಲಾಗಿದೆ. ಮುಂದಿನ ವಾರದಲ್ಲೂ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ. ಹಾಗಿದ್ದರೂ ಕೆಲವು ಕಡೆ ಮೋಡ ಕವಿದ ವಾತಾವರಣವಿರಬಹುದು. ಅದರ ಹೊರತಾಗಿ ಮಳೆಯ ಸಾಧ್ಯತೆ ಕಡಿಮೆ ಎಂದೇ ವರದಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಿಖಿತ ಭರವಸೆಗೆ ಪಟ್ಟು ಹಿಡಿದ ಆಶಾ ಕಾರ್ಯಕರ್ತೆಯರು

ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಲು ಸಿದ್ಧತೆ ಬೆನ್ನಲ್ಲೇ ದರ್ಗಾಕ್ಕೆ ಪ್ರಾರ್ಥನೆ ಮಾಡಲು ಗುಂಪಾಗಿ ಬಂದ ಮುಸ್ಲಿಮರು Video

ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಹುಡುಗಿಗೆ ನಂದಿ ಮಾಡಿದ್ದೇನು ನೋಡಿ: ಕ್ಯೂಟ್ Video

ಎಪ್ಪುಡಿ ಇರುಕ್ಕುಂ…. ಸಿಎಂ ವಿಜಯ್ ಸ್ಟೈಲ್ ನಲ್ಲೇ ಸ್ಲೈಸ್ ಸನ್ನೆ ಮಾಡಿ ಮುರುಗನ್ ಭಕ್ತರ ಸಂಭ್ರಮ Video

ಸಿಎಂ ವಿಜಯ್ ಸರ್ಕಾರಕ್ಕೆ ಮುಖಭಂಗ: ಸುಪ್ರೀಂ ಆದೇಶದಂತೆ ಇಂದು ತಿರುಪ್ಪರಂಕುಂದ್ರನಲ್ಲಿ ಜ್ಯೋತಿ ಬೆಳಗೋದು ಎಷ್ಟೊತ್ತಿಗೆ

ಮುಂದಿನ ಸುದ್ದಿ
Show comments