Webdunia - Bharat's app for daily news and videos

Install App

Karnataka Weather: ಈ ವಾರದ ಹವಾಮಾನ ವರದಿ ನಿಜಕ್ಕೂ ಬೆವರಿಳಿಸುವಂತಿದೆ

Krishnaveni K
ಸೋಮವಾರ, 2 ಮಾರ್ಚ್ 2026 (08:44 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಮಳೆ ಮತ್ತು ಬಿಸಿಲಿನ ಕಣ್ಣಾಮುಚ್ಚಾಲೆ ಕಂಡುಬಂದಿತ್ತು. ಆದರೆ ಈ ವಾರದ ಹವಾಮಾನ ವರದಿ ನೋಡಿದರೆ ನಿಜಕ್ಕೂ ಮೈ ಬೆವರಿಳಿಯಬಹುದು.

ದೇಶದ ಬಹುತೇಕ ಭಾಗಗಳಲ್ಲಿ ಬೇಸಿಗೆ ಕಾಲಿಟ್ಟಿದೆ. ಕಳೆದ ವಾರವಿಡೀ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಆಗಾಗ ಸಣ್ಣ ಮಳೆಯಾಗಿತ್ತು. ಉಳಿದಂತೆ ಭಾಗಶಃ ಮೋಡಕವಿದ ವಾತಾವರಣವಿತ್ತು. ಆದರೆ ಈ ವಾರದಿಂದ ವಾತಾವರಣದಲ್ಲಿ ಬದಲಾವಣೆ ಕಂಡುಬರಲಿದೆ.

ಬೇಸಿಗೆಯ ತಾಪ ಈ ವಾರ ಇನ್ನಷ್ಟು ಹೆಚ್ಚಾಗಲಿದೆ. ತಾಪಮಾನದಲ್ಲಿ 2-4 ಡಿಗ್ರಿಯಷ್ಟು ಏರಿಕೆ ಕಂಡುಬರುವುದು. ವಾರವಿಡೀ ಮಳೆ ಬಿಡಿ, ಮೋಡ ಕವಿದ ವಾತಾವರಣವೂ ಇರಲ್ಲ. ಶುಭ್ರ ಆಕಾಶ ಮತ್ತು ರಣ ಬಿಸಿಲು ಕಂಡುಬರಲಿದೆ.

ರಾಜ್ಯದ ಈ ವಾರದ ಗರಿಷ್ಠ ತಾಪಮಾನ 33 ಡಿಗ್ರಿಯಿಂದ 31 ಡಿಗ್ರಿಯವರೆಗೆ ಏರಿಕೆಯಾಗಲಿದೆ. ಕನಿಷ್ಠ ತಾಪಮಾನ 18-19 ಡಿಗ್ರಿಯಷ್ಟು ಕಂಡುಬರುವುದು. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ರಾಯಚೂರು, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ವಾರ ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗಲಿದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಮೈಸೂರು, ಬೆಳಗಾವಿ ಮೊದಲಾದ ಜಿಲ್ಲೆಗಳಲ್ಲಿ 34 ಡಿಗ್ರಿಯಷ್ಟಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು ಮಳೆ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ

ಪ್ರೀತಿಸಿ ಮದುವೆಯಾದ ಪತ್ನಿಯ ರುಂಡ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ ಪೊಲೀಸ್ ವಾಹನದಿಂದ ಜಿಗಿದು ಆತ್ಮಹತ್ಯೆ

ರಾಜ್ಯ ರಾಜಧಾನಿಯ ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು ಶಾಲಾ ಸಮಯ ಬದಲಾಯಿಸಲು ಶಿಕ್ಷಣ ಇಲಾಖೆ ಸಿದ್ಧತೆ

ಗಣೇಶ ಹಬ್ಬದಂದೇ ಪತ್ನಿ ಪಾರ್ವತಿಯ ಬಹುದೊಡ್ಡ ಕನಸನ್ನು ನನಸಾಗಿದ ಸಿದ್ದರಾಮಯ್ಯ

BRICS ಸಮ್ಮೇಳನದಲ್ಲಿ ಸಸ್ಯಾಹಾರ ಊಟವೇ ಯಾಕಿದೆ: ಪ್ರಶ್ನೆ ಮಾಡಿದ ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments