Webdunia - Bharat's app for daily news and videos

Install App

ಕರ್ನಾಟಕ ಹವಾಮಾನ: ಇಂದಿನಿಂದ ಹವಾಮಾನದಲ್ಲಿ ಬದಲಾವಣೆ, ಈ ದಿನಗಳಲ್ಲಿ ಮಳೆ ಖಚಿತ

Krishnaveni K
ಸೋಮವಾರ, 27 ಜನವರಿ 2025 (09:58 IST)
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಹವಾಮಾನದಲ್ಲಿ ಈ ಒಂದು ಸಣ್ಣ ಬದಲಾವಣೆ ಕಂಡುಬರಬಹುದು ಎಂದು ಹವಾಮಾನ ವರದಿ ಹೇಳುತ್ತಿದೆ. ಜೊತೆಗೆ ಮಳೆಯ ಸಾಧ್ಯತೆಯೂ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

ಕಳೆದ ವಾರವಿಡೀ ಕರ್ನಾಟಕದಲ್ಲಿ ವಿಪರೀತ ಚಳಿಯಿತ್ತು. ಅದರಲ್ಲೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ತಾಪಮಾನ ವಿಪರೀತ ಇಳಿಕೆಯಾಗಿತ್ತು. ಆದರೆ ಇಂದಿನಿಂದ ಹವಾಮಾನದಲ್ಲಿ ಮತ್ತೆ ಕೊಂಚ ಬದಲಾವಣೆಯಾಗಲಿದೆ ಎಂದು ಸೂಚನೆ ಸಿಕ್ಕಿದೆ.

ಇದುವರೆಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ತಾಪಮಾನ 16-18 ಡಿಗ್ರಿಯಷ್ಟಿತ್ತು. ಕಳೆದ ವಾರ ಮಳೆಯ ಜೊತೆ ವಿಪರೀತ ಮಂಜು ಬೀಳುತ್ತಿತ್ತು. ಆದರೆ ಈ ವಾರದಿಂದ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದೆ. ಒಣ ಹವೆ ಪ್ರಭಾವ ಹೆಚ್ಚಾಗಲಿದ್ದು, ತಾಪಮಾನವೂ ಏರಿಕೆಯಾಗಲಿದೆ.

ಈ ವಾರವೂ ಮೋಡ ಮತ್ತು ಸೂರ್ಯನ ನಡುವೆ ಕಣ್ಣಾಮುಚ್ಚಾಲೆ ಮುಂದುವರಿಯಲಿದೆ. ಆದರೆ ತಾಪಮಾನದಲ್ಲಿ ಎರಡರಿಂದ ಮೂರು ಡಿಗ್ರಿಯಷ್ಟು ಏರಿಕೆ ಕಂಡುಬರುವ ಸಾಧ್ಯತೆಯಿದೆ. ಚಳಿ ಕೊಂಚ ಕಡಿಮೆಯಾಗಲಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ಸಿಕ್ಕಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಫೆಬ್ರವರಿ 1, 2 ರಂದು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಬಾಗಲಕೋಟೆ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿಮೊಗ್ಗ, ಚಿತ್ರದುರ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments