Daily Horoscope
✕

ಕರ್ನಾಟಕ ಹವಾಮಾನ: ಈ ದಿನ ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ

Krishnaveni K
ಶನಿವಾರ, 25 ಜನವರಿ 2025 (10:00 IST)
ಬೆಂಗಳೂರು: ಕರ್ನಾಟಕದಲ್ಲಿ ಈ ವಾರವಿಡೀ ಚಳಿಯ ವಾತಾವರಣವಿತ್ತು. ಮುಂದಿನ ವಾರ ಒಂದು ದಿನ ರಾಜ್ಯದಲ್ಲಿ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.

ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಇದು ಈ ವರ್ಷದ ಮೊದಲ ಮಳೆಯಾಗಿತ್ತು. ಇದೀಗ ಮತ್ತೆ ಚಳಿಯ ವಾತಾವರಣ ಮುಂದುವರಿದಿದೆ. ಉತ್ತರ ಒಳನಾಡಿನಲ್ಲಂತೂ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ಇಂದಿನಿಂದ ಕೊಂಚ ಮೋಡ ಕವಿದ ವಾತಾವರಣವಿದೆ. ನಾಲ್ಕೈದು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ. ಅರಬ್ಬಿ ಸಮುದ್ರದಲ್ಲಿ ಸಣ್ಣ ಮಟ್ಟಿಗೆ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದೆ ಎನ್ನಲಾಗಿದೆ.

ಮುಂದಿನ ವಾರಂತ್ಯದ ವೇಳೆಗೆ ಕರ್ನಾಟಕದಲ್ಲಿ ಕೆಲವೆಡೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಅದಾದ ಬಳಿಕ ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಕಂಡುಬರಲಿದೆ. ಇನ್ನು ಎರಡು ವಾರದ ಬಳಿಕ ಚಳಿಯ ವಾತಾವರಣ ಮುಗಿದು ನಿಧಾನವಾಗಿ ಸೆಖೆಗಾಲ ಶುರುವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಣ‍್ಮುಚ್ಚಿ ತೆರೆಯುವಷ್ಟರಲ್ಲಿ ಈ ಖದೀಮ ಅಂಗಡಿಯಲ್ಲಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ದಿಢೀರ್ ಇಳಿಕೆ

ಆಲೂಗಡ್ಡೆಯಿಂದ ಚಿನ್ನ ತೆಗಿಯೋದು ಹೇಗೆಂದು ರೈತರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ: ರಾಹುಲ್ ಟ್ರೋಲ್ ಮಾಡಿದ ಮೋದಿ

ಎಸ್ಐಅರ್ ಸರಿಯಾಗಿದೆ ಎಂದು ವಿವಾದವಾಗುತ್ತಿದ್ದಂತೇ ಹಾಗಲ್ಲ ಹೀಗೆ ಹೇಳಿದ್ದು ಸತೀಶ್ ಜಾರಕಿಹೊಳಿ

ಅರ್ನಬ್ ಸೈಕ್ಲೋನ್ ಗೂ ಜಗ್ಗಲಿಲ್ಲ: ಪುರಿ ಜಗನ್ನಾಥ ಸ್ವಾಮಿ ಗೋಪುರದಲ್ಲಿ ನಡೆದ ವಿಸ್ಮಯಕ್ಕೆ ಭಕ್ತರು ಶಾಕ್ Video

ಮುಂದಿನ ಸುದ್ದಿ
Show comments