Daily Horoscope
✕

Karnataka Weather: ವಾರಂತ್ಯಕ್ಕೆ ಗರಿಷ್ಠ ತಾಪಮಾನದ ನಡುವೆಯೂ ಈ ಜಿಲ್ಲೆಗಳಿಗೆ ಮಳೆ ಸಾಧ್ಯತೆ

ಕೃಷ್ಣವೇಣಿ ಕೆ
ಶನಿವಾರ, 18 ಏಪ್ರಿಲ್ 2026 (08:29 IST)
ಬೆಂಗಳೂರು: ಕರ್ನಾಟಕದಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಇಂದು ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ವಿಪರೀತ ಏರಿಕೆಯಾದರೂ ಇದರ ನಡುವೆಯೂ ಸಣ್ಣ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾರವಿಡೀ ವಿಪರೀತ ಬಿಸಿಲು, ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಈ ವಾರ ಅಷ್ಟೊಂದು ಮಳೆಯಾಗಿರಲಿಲ್ಲ. ವಾರಂತ್ಯಕ್ಕೂ ತಾಪಮಾನ ವಿಪರೀತ ಏರಿಕೆಯಾಗಲಿದೆ. ಆದರೆ ಇದರ ನಡುವೆಯೂ ತುಂತುರು ಮಳೆಯ ಸಾಧ್ಯತೆಯಿದೆ.

ರಾಯಚೂರು, ಕಲಬುರಗಿ, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ದಾಟಲಿದೆ. ಹಾಗಿದ್ದರೂ ಈ ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ತುಂತುರು ಮಳೆ ಅಥವಾ ಮೋಡ ಕವಿದ ವಾತಾವರಣ ಸಾಧ್ಯತೆಯೂ ಇದೆ ಎನ್ನುತ್ತಿದೆ ಹವಾಮಾನ ವರದಿಗಳು.

ಇದಲ್ಲದೆ ದಕ್ಷಿಣ ಕನ್ನಡ, ತುಮಕೂರು, ಕೊಪ್ಪಳ, ಧಾರವಾಡ, ಬೀದರ್, ಗದಗ, ಬೆಳಗಾವಿ ಜಿಲ್ಲೆಗಳಲ್ಲೂ ಇಂದು ಅಥವಾ ನಾಳೆ ತುಂತುರು ಮಳೆಯ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಉರಿಬಿಸಿಲು ಮುಂದುವರಿಯಲಿದೆ. ಇಂದು ಮತ್ತು ನಾಳೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 35-36 ಡಿಗ್ರಿಯಷ್ಟಿರಲಿದೆ. ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ದಿನಾಂಕ ಮತ್ತು ಬೆಲೆ ಪ್ರಕಟ: ಷೇರು ಬೆಲೆ ನಿಗದಿ

ರಸ್ತೆ ಬದಿ ಸ್ಕೂಟಿಯಲ್ಲಿ ಕೂತಿದ್ದ ಅಪ್ರಾಪ್ತೆಯ ತಬ್ಬಿ ಇದೆಂಥಾ ಅಸಭ್ಯ ವರ್ತನೆ: ಶಾಕಿಂಗ್ Video

ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ಪ್ರಮಾಣವಚನ

ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯಲ್ಲೇ ಮದ್ಯದ ಪಾರ್ಟಿ: Viral video

ದೆಹಲಿಯಲ್ಲಿ ಇಂದು ಸಿಜೆಪಿ ತಿರಂಗಾ ಮಾರ್ಚ್: ಕಾನಾಟ್ ಪ್ಲೇಸ್ ಸೆಂಟ್ರಲ್ ಪಾರ್ಕ್ ಬಂದ್, ಬಿಗಿ ಪೊಲೀಸ್ ಭದ್ರತೆ

ಮುಂದಿನ ಸುದ್ದಿ
Show comments