Webdunia - Bharat's app for daily news and videos

Install App

Karnataka Weather: ಈ ವಾರ ರಾಜ್ಯದಲ್ಲಿ ಮಳೆಯಿರುತ್ತಾ ಇಲ್ಲಿದೆ ಹವಾಮಾನ ವರದಿ

Krishnaveni K
ಸೋಮವಾರ, 13 ಏಪ್ರಿಲ್ 2026 (08:33 IST)
ಬೆಂಗಳೂರು: ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಈ ವಾರ ಮಳೆಯಾಗುತ್ತಾ, ಅಥವಾ ಬಿಸಿಲು ಹೆಚ್ಚಾಗಲಿದೆಯಾ ಇಲ್ಲಿದೆ ವಾರದ ಹವಾಮಾನ ವರದಿ.

ರಾಜ್ಯದಲ್ಲಿ ಈಗ ಕಡು ಬೇಸಿಗೆಯ ನಡುವೆ ಅಲ್ಲಲ್ಲಿ ಮಳೆ ತಂಪು ನೀಡುತ್ತಿದೆ.  ವಾರಂತ್ಯದಲ್ಲೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಈ ವಾರವೂ ಕೆಲವು ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗುವ ಸೂಚನೆಯಿದೆ.

ಈ ವಾರವಿಡೀ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧದ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಈ ವಾರ ಮಳೆಯ ಸೂಚನೆಯಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ರಾಜ್ಯದ ಸರಾಸರಿ ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಈ ವಾರ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು ಕನಿಷ್ಠ ತಾಪಮಾನ 23 ಡಿಗ್ರಿಯಷ್ಟು ಕಂಡುಬರಲಿದೆ. ಬೆಂಗಳೂರಿನಲ್ಲೂ ಈ ವಾರಂತ್ಯದ ವೇಳೆಗೆ ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗಲಿದೆ. ಇನ್ನು ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಂತೂ ಈ ವಾರವೇ ಗರಿಷ್ಠ ತಾಪಮಾನ 40 ಡಿಗ್ರಿ ದಾಟಲಿದೆ. ಹೀಗಾಗಿ ಈ ವಾರ ವಿಪರೀತ ಬಿಸಿಲು ಎದುರಿಸಲು ಸಿದ್ಧರಾಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ವೇಣುಗೋಪಾಲ್ ಹಕ್ಕುಚ್ಯುತಿ ನೋಟಿಸ್

ಸಿಟಿ ರವಿ ವಿರುದ್ಧ ಮಾನಹಾನಿಕರ ಪೋಸ್ಟ್; ತೆರವಿಗೆ ನ್ಯಾಯಾಲಯ ಖಡಕ್ ಆದೇಶ

ಸಿಎಂ ಬಂಡತನದಿಂದ ವರ್ತಿಸಬೇಡಿ ಬಂಡೆಯಂತೆ ನಿಲ್ಲಿ: ಸಿಟಿ ರವಿ

ಪ್ರತಿಭಟನೆಯಲ್ಲಿ ಮೋದಿ ವಿರುದ್ಧ ಬಾಯಿ ಹರಿಬಿಟ್ಟ ರುಚಿಕಾ ಸಿಂಗ್ ತಾಯಿ ಕ್ಷಮೆಯಾಚನೆ

ಪ್ರಸ್ತುತ ನಮ್ಮ ಜಲಾಶಯಗಳ ನೀರು ಶೇಖರಣೆಯ ಮಾಹಿತಿ ಮುಚ್ಚಿಡಲು ಸಾಧ್ಯವಿಲ್ಲ: ಡಿಕೆ ಶಿವಕುಮಾರ್‌:

ಮುಂದಿನ ಸುದ್ದಿ
Show comments