Select Your Language

Notifications

webdunia
webdunia
webdunia
webdunia

ರಾಜ್ಯದ ಆರು ಜಿಲ್ಲೆಗಳಿಗೆ ಮೋದಿಯ ಸ್ಮಾರ್ಟ್ ಸಿಟಿ ಸೌಭಾಗ್ಯ

ರಾಜ್ಯದ ಆರು ಜಿಲ್ಲೆಗಳಿಗೆ ಮೋದಿಯ ಸ್ಮಾರ್ಟ್ ಸಿಟಿ ಸೌಭಾಗ್ಯ
ಬೆಂಗಳೂರು , ಗುರುವಾರ, 20 ನವೆಂಬರ್ 2014 (13:10 IST)
ಕೇಂದ್ರ ಸರ್ಕಾರದ 100 ಸ್ಮಾರ್ಟ್ ಸಿಟಿಗಳ ಯೋಜನೆಯಲ್ಲಿ ರಾಜ್ಯಕ್ಕೆ 6 ಸ್ಮಾರ್ಟ್ ಸಿಟಿಗಳ ಪಾಲು ಸಿಕ್ಕಿದೆ. ರಾಜ್ಯಕ್ಕೆ 8 ಸ್ಮಾರ್ಟ್ ಸಿಟಿಗಳನ್ನು ರೂಪಿಸುವ ಅವಕಾಶವಿತ್ತಾದರೂ, ಜನಸಂಖ್ಯೆ ಆಧಾರಿತವಾಗಿ 6 ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
 
ಕೇಂದ್ರ ಸರ್ಕಾರದ ಪ್ರಕಾರ ಐದರಿಂದ ಹತ್ತು ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಬಹುದಾಗಿದೆ.
ಸ್ಮಾರ್ಟ್ ಹೇಗೆ?
 
ಪ್ರತಿಯೊಂದು ಸ್ಮಾರ್ಟ್ ಸಿಟಿಗೂ ರು.500ದ ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆ, 24 ಗಂಟೆ ವಿದ್ಯುತ್, ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಇರುತ್ತದೆ. ಆದರೆ ಕೇಂದ್ರ, ರಾಜ್ಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಬೆಂಬಲದಿಂದ ಸ್ಥಾಪಿಸಬೇಕೇ ಅಥವಾ ಪಿಪಿಪಿ ಮಾದರಿಯಲ್ಲಿ ರೂಪಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಯೋಜನೆ ಜಾರಿಗೆ ಸರ್ಕಾರ ಸಿದ್ಧವಿದ್ದು, ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅವರು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ ಎಂದಿದ್ದಾರೆ ಕುಮಾರ್ ಸೊರಕೆ.
 
ಮೂರು ಸ್ಯಾಟ್‌ಲೈಟ್ ಟೌನ್
 
ನಗರಗಳ ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ಪರ್ಯಾಯ ನಗರಗಳ ರೂಪಿಸುವುದು ಅಗತ್ಯ ಎಂಬುದು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸೂತ್ರಗಳು ಹೇಳುತ್ತವೆ. ಹೀಗಾಗಿ 50 ಲಕ್ಷ ಜನಸಂಖ್ಯೆ ಮೀರಿದ ನಗರಗಳಲ್ಲಿ ಪರ್ಯಾಯ ನಗರಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಈ ಪ್ರಕಾರ ಮೂರು ಹೊಸ ಸ್ಯಾಟ್ ಲೈಟ್ ಟೌನ್‌ಗಳ ಆರಂಭಕ್ಕೆ ಶಿಫಾರಸು ಮಾಡಿದ್ದೇವೆ.
 
ಇದಕ್ಕಾಗಿ ಸ್ಮಾರ್ಟ್ ಸಿಟಿ ಹಾಗೂ ಸ್ಟಾಟಲೈಟ್ ಟೌನ್‌ಗಳಲ್ಲಿ ತಂತ್ರಜ್ಞಾನ ಅಬಿವೃದ್ಧಿಪಡಿಸುವ ಸಂಬಂಧ ಐಐಟಿ ಜತೆ ಸರ್ಕಾರ ಮಾತುಕತೆ ನಡೆಸಿದೆ ಎದು ಹೇಳಿದರು. ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ಆಡಳಿತ ಇದುವರೆಗೆ ನಗರಾಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುತ್ತಿತ್ತು. ಆದರೆ ಇನ್ನು ಮುಂದೆ ಇದರ ಆಡಳಿತಕ್ಕಾಗಿಯೇ ಪ್ರತ್ಯೇಕ ಕಮಿಷನರೇಟ್ ಆರಂಭಿಸುವುದಾಗಿ ಅವರು ಹೇಳಿದರು.
 
ಉಪನಗರಗಳು
 
ಬೆಂಗಳೂರು ಜನಸಂಖ್ಯೆ 90 ಲಕ್ಷ ಮೀರಿದೆ. ಹೀಗಾಗಿ ರಾಮನಗರ, ದೇವನಹಳ್ಳಿ ಹಾಗೂ ತುಮಕೂರು ನಗರಗಳನ್ನು ಉಪನಗರಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.

Share this Story:

Follow Webdunia kannada