Webdunia - Bharat's app for daily news and videos

Install App

ಕರ್ನಾಟಕ ಹಿಜಾಬ್​ ವಿವಾದ: ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಭಾರತದ ಗುಪ್ತಚರ ಸಂಸ್ಥೆಗಳು

Webdunia
ಶನಿವಾರ, 12 ಫೆಬ್ರವರಿ 2022 (20:39 IST)
ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್​ ಫಾರ್ ಜಸ್ಟೀಸ್​ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್​ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು ಎಂದೂ ಗುಪ್ತಚರ ಸಂಸ್ಥೆಗಳು ಹೇಳಿವೆ.
 
ಕರ್ನಾಟಕ ಹಿಜಾಬ್​ ವಿವಾದ:
ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಭಾರತದ ಗುಪ್ತಚರ ಸಂಸ್ಥೆಗಳು
ಹಿಜಾಬ್​ ಧರಿಸಿದ ಯುವತಿಯರು (ಪಿಟಿಐ ಚಿತ್ರ)
ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್​ ವಿವಾದಕ್ಕೆ (Hijab Row) ಪಾಕಿಸ್ತಾನದ ಸಚಿವರಿಬ್ಬರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ರಾಷ್ಟ್ರ ಮಟ್ಟದಲ್ಲೂ ಅನೇಕರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಿರುವಾಗ ಗುಪ್ತಚರ ಸಂಸ್ಥೆಗಳು ಶಾಕಿಂಗ್​ ಮಾಹಿತಿಯೊಂದನ್ನು ನೀಡಿವೆ. ಭಾರತದ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದವನ್ನು ಇನ್ನಷ್ಟು ಹೆಚ್ಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಪ್ರಯತ್ನ ಮಾಡುತ್ತಿದೆ. ಅದೂ ಕೂಡ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್​ ಫಾರ್​ ಜಸ್ಟೀಸ್​ ಮೂಲಕ ಜಿಜಾಬ್ ವಿವಾದಕ್ಕೆ ಉತ್ತೇಜನ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಮಾಹಿತಿ ನೀಡಿವೆ ಎಂಬುದು ಮೂಲಗಳಿಂದ ತಿಳಿದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್​ ಫಾರ್ ಜಸ್ಟೀಸ್​ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್​ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು. ಈ ಮೂಲಕ ಇಲ್ಲಿನ ಪರ-ವಿರೋಧ ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದೂ ದೇಶದ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಭಾರತದ ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಉರ್ದುಸ್ತಾನ್​ ಪರಿಕಲ್ಪನೆಗೆ ಉತ್ತೇಜನ ನೀಡಲು, ಈ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಹಿಜಾಬ್​ ಜನಾಭಿಪ್ರಾಯ ಚಳವಳಿ ಪ್ರಾರಂಭಿಸಲು ಮುಸ್ಲಿಮರಿಗೆ ಕರೆ ನೀಡಿದೆ ಎಂದೂ ಹೇಳಲಾಗಿದೆ. ಅಷ್ಟೇ ಅಲ್ಲ, ಎಸ್​ಎಫ್​ಜೆ ಮುಖ್ಯಸ್ಥ ಈಗಾಗಲೇ ವಿಡಿಯೋ ಸಂದೇಶದ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿದ್ದಾನೆ ಎಂದೂ ತಿಳಿಸಿಲಾಗಿದೆ.
ಭಾರತದಲ್ಲಿ ಉರ್ದುಸ್ತಾನ್ ರಚಿಸಲು ಎಸ್​ಎಫ್​ಜೆ ಎಲ್ಲ ರೀತಿಯ ಸಹಾಯ ಮಾಡುತ್ತದೆ. ಹಿಜಾಬ್​ ವಿವಾದಕ್ಕೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಸಂಗ್ರಹಣೆ ಮಾಡಲು, ಜನರನ್ನು ಹೆಚ್ಚೆಚ್ಚು ಸಂಘಟಿಸಲು ಧನಸಹಾಯ ಮಾಡುತ್ತದೆ ಎಂದು ಸಂಘಟನೆಯ ಮುಖ್ಯಸ್ಥರು ಭಾರತದ ಮುಸ್ಲಿಮರಿಗೆ ಅದರಲ್ಲೂ ಈ ಹಿಜಾಬ್​ ಪರ ಹೋರಾಟ ನಡೆಸುತ್ತಿರುವವರಿಗೆ ಭರವಸೆ ನೀಡಿದ್ದಾರೆ. ಹಿಜಾಬ್​ಗೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಸಂಗ್ರಹಣೆ ಮಾಡಲು ಆನ್​ಲೈನ್​ ನೋಂದಣಿ ವೇದಿಕೆಗಳೂ ಶುರುವಾಗಿದ್ದು, ಅದರ ಸ್ಕ್ರೀನ್​ಶಾಟ್​ ಫೋಟೋಗಳು ಸಿಕ್ಕಿದ್ದಾಗಿಯೂ ಭಾರತೀಯ ಗುಪ್ತಚರ ಇಲಾಖೆಗಳು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೆ ವರದಿ ಮಾಡಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ