ರಾಜ್ಯದಲ್ಲಿ ಮಿಶನ್ 150 ಅಭಿಲಾಷೆ ಇಟ್ಟುಕೊಮಡಿರುವ ರಾಜ್ಯ ಬಿಜೆಪಿಯಲ್ಲಿ ಭಿನ್ಮಮತ ಮಾತ್ರ ಮುಗಿಯುತ್ತಿಲ್ಲ. ಅಮಿತ್ ಶಾ ನಿವಾಸದಲ್ಲಿ ಸಂಧಾನ ನಡೆದ ಬಳಿಕವೂ ಭಿನ್ನಮತ ಜೋರಾಗಿಯೇ ನಡೆಯುತ್ತಿದೆ. ಚುನಾವಣಾ ವರ್ಷದಲ್ಲೇ ನಾಯಕರ ಭಿನ್ನಮತ ಬೀದಿಗೆ ಬಂದಿದೆ.
ಇವತ್ತು ಅರಮನೆ ಮೈದಾನದಲ್ಲಿ ಅತೃಪ್ತರ ಬಹಿರಂಗ ಸಭೆ ನಡೆಯುತ್ತಿದ್ದು, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಸೇರಿ ಹಲವು ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, `ಸಂಘಟನೆ ಉಳಿಸೋಣ ಬನ್ನಿ’ ಎಂದು ಸಭೆಗೆ ಹೆಸರಿಟ್ಟಿರುವುದು ಭಾರೀ ಕುತೂಹಲ ಕೆರಳಿಸಿದೆ. ಪದಾಧಿಕಾರಿಗಳ ನೇಮಕದ ಬಗ್ಗೆ ಎದ್ದಿದ್ದ ಅಸಮಾಧಾನದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಾದಾಧಿಕಾರಿಗಳ ಆಯ್ಕೆ ಕುರಿತ ಭಿನ್ನಮತ ಪರಿಹಾರಕ್ಕೆ ರಚಿಸಿದ್ದ ಸಮಿತಿ 3 ತಿಂಗಳಿಂದ ಸಭೆ ನಡೆಸದಿರುವುದು ಅತೃಪ್ತರನ್ನ ಕೆರಳಿಸಿದೆ.
ನಿನ್ನೆಯೇ ಸುದ್ದಿಗೋಷ್ಠಿ ನಡೆಸಿದ ಬಿಎಸ್`ವೈ ಅಪ್ತ ಬಿ.ಜೆ. ಪುಟ್ಟಸ್ವಾಮಿ, ಅತೃಪ್ತರ ಸಭೆಯಲ್ಲಿ ಭಾಗವಹಿಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಹೈಕಮೆಲ ನಿರ್ಧಾರ ಕೈಗೊಂಡಿದ್ದೇನೆ. ಅಂಡ್ ಸಂಪರ್ಕಿಸಿರುವ ಯಡಿಯೂರಪ್ಪ, ಅತೃಪ್ತರ ಕೆಲ ಬೇಡಿಕೆ ಈಡೇರಿಸಲಾಗಿದೆ. ಆದರೂ ಅತೃಪ್ತರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷನಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲ ನಿರ್ಧಾರ ಕೈಗೊಂಡಿದ್ದೇನೆ. ಎಲ್ಲವನ್ನೂ ಅವರು ಹೇಳಿದಂತೆ ಕೈಗೊಳ್ಳಲು ಸಾಧ್ಯವಿಲ್ಲ. ಮಿಶನ್150ಗೆ ಈ ಚಟುವಟಿಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ