ಶುಕ್ರವಾರ ಕರ್ನಾಟಕ ಬಂದ್!

Webdunia
ಭಾನುವಾರ, 24 ಸೆಪ್ಟಂಬರ್ 2023 (15:29 IST)
ತಮಿಳುನಾಡಿಗೆ ನೀರು ಹರಿಸಲು ಸುಪ್ರೀಂಕೋರ್ಟ್‌ನ ಆದೇಶಕ್ಕೆ ಕರ್ನಾಟಕ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಇಡೀ ಕರ್ನಾಟಕವನ್ನೇ ಬಂದ್ ಮಾಡಲು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ಶುಕ್ರವಾರ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದು, ನಾಳೆ ಸಭೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ತೇವೆ ಎಂದು ಹೇಳಿದ್ದಾರೆ.

ಕಾವೇರಿ ನೀರಿಗಾಗಿ ಕರುನಾಡಿನಲ್ಲಿ ಹೋರಾಟ ತೀವ್ರಗೊಂಡಿದೆ. ಮಂಗಳವಾರದ ಬೆಂಗಳೂರು ಬಂದ್​ಗೆ ಬೀದಿಬದಿ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದಾರೆ.. ಮಂಗಳವಾರ ನಾವು ವ್ಯಾಪಾರ ನಡೆಸುವುದಿಲ್ಲ. ಕಾವೇರಿ ನಮ್ಮದು...ಕಾವೇರಿ ನಮ್ಮ ಉಸಿರು. ನೀರಿಲ್ಲ ಅಂದ್ರೆ ಹೂ -ಹಣ್ಣು, ತರಕಾರಿ ಹೇಗೆ ಬೆಳೆಯೋದು. ಹೂ-ಹಣ್ಣು ವ್ಯಾಪಾರ ನಂಬಿಕೊಂಡು ನಾವು ಬದುಕುತ್ತಿರುವುದು. ಹೀಗಾಗಿ ಬಂದ್‌ಗೆ ನಮ್ಮ ಬೆಂಬಲ ಸಂಪೂರ್ಣವಾಗಿ ಇರುತ್ತದೆ ಎಂದಿದ್ದಾರೆ.. ಇನ್ನು ಪಬ್ ಆಂಡ್ ಬಾರ್ ಮಾಲೀಕರ ಅಸೋಸಿಯೇಷನ್​​​ನಲ್ಲಿ ಕೆಲ ಗೊಂದಲ ಸೃಷ್ಠಿಯಾಗಿದ್ದು, ಅಧಿಕಾರಿಗಳ ಜೊತೆ ಸಭೆಯ ನಂತರ ಬಾರ್ ಆಂಡ್ ಪಬ್ ಬಂದ್ ಚಿಂತನೆ ನಡೆಸಲಾಗುತ್ತದೆ ಎಂದು ಪಬ್ ಆಂಡ್ ಬಾರ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಕರುಣಾಕರ ಹೆಗಡೆ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಪಟ್ಟಿ ಅಕ್ರಮದ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಇದು actually ಚೆನ್ನಾಗಿರೋದು.. ರೈಲಿಗೆ ಕಲ್ಲು ತೂರುತ್ತಿದ್ದವನ ಸೆರೆಹಿಡಿದು ಪೊಲೀಸರು ಮಾಡಿದ್ದೇನು ನೋಡಿ Video

Video: ಗಂಡನನ್ನು ಕೊಂದು ಟಾಯ್ಲೆಟ್ ನಲ್ಲಿ ಹೂತಿಟ್ಟು ಆಸ್ಕರ್ ಲೆವೆಲ್ ಗೆ ಆಕ್ಟಿಂಗ್: ಉತ್ತರ ಪ್ರದೇಶದ ರೂಬಿ ಕಿಲ್ಲಿಂಗ್ ಕಹಾನಿ ಇಲ್ಲಿದೆ

ಕೋಟಿ ರೂ ಖರ್ಚು ಮಾಡಿ ರಸ್ತೆ ಮಾಡಿದ್ದು ದನ ಸಾಕೋದಿಕ್ಕಾ... ಶಾಸಕ ರವಿ ಸುಬ್ರಹ್ಮಣ್ಯ ರೋಷಾವೇಷ Video

ಮತಪಟ್ಟಿ ಪರಿಷ್ಕರಣೆಯ ಮತ್ತೊಂದು ಕರ್ಮಕಾಂಡ ಬಯಲು: ಸಾರಾ ಮಹೇಶ್ ಗಂಭೀರ ಆರೋಪ

ಮುಂದಿನ ಸುದ್ದಿ
Show comments