ಬೆಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿ, ವಿಧಾನಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಯಿತು. ಈ ವೇಳೆ ಸದನದಿಂದ ಹೊರಹೋಗದ ಶಾಸಕರನ್ನು ಮಾರ್ಷಲ್ ಹೊತ್ತು ಹೊರ ಹಾಕಿದರು.
ಬಿಜೆಪಿ ಶಾಸಕರು ಸದನದ ಬಾವಿಗೆ ಪ್ರವೇಶಿಸಿದಾಗ ಮತ್ತು ಸ್ಪೀಕರ್ ಯು.ಟಿ. ಅವರ ಕುರ್ಚಿಯ ಮೇಲೆ ಕಾಗದಗಳನ್ನು ಹರಿದು ಎಸೆದಾಗ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು.
ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ಗುತ್ತಿಗೆ ಕೆಲಸದಲ್ಲಿ ನಾಲ್ಕು ಪ್ರತಿಶತ ಮೀಸಲಾತಿ ನೀಡುವ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತು.
ಇಂದು ಮುಂಜಾನೆ, ಕರ್ನಾಟಕ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಹನಿ ಟ್ರ್ಯಾಪ್ ಪ್ರಯತ್ನದ ಆರೋಪ ಹೊರಿಸಿದ ನಂತರ ರಾಜ್ಯ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು.ಇದರಿಂದ 18ಬಿಜೆಪಿ ಶಾಸಕರನ್ನು 6ತಿಂಗಳ ಕಾಲ ಅಮಾನತುಗೊಳಿಸಲಾಯಿತು.
ಅಮಾನತುಗೊಂಡ ಎಲ್ಲ ಸದಸ್ಯರಿಗೆ ಸ್ವಯಂಪ್ರೇರಿತವಾಗಿ ಸದನದಿಂದ ಹೊರ ಹೋಗುವಂತೆ ಸಭಾಧ್ಯಕ್ಷರು ಮನವು ಮಾಡಿದ್ದರು. ಇನ್ನೂ ಹತ್ತು ನಿಮಿಷಗಳ ಕಾಲ ಮುಂದೂಡಲಲಾಯಿತು. ಆದರೆ ಅಮಾನತು ಆದ ಶಾಸಕರು ಸ್ವಯಂಪ್ರೇರಿತವಾಗಿ ಹೊರ ಹೋಗದೆ ಕಾರಣ, ಮಾರ್ಷಲ್‌ಗಳೇ ಅವರನ್ನು ಹೊತ್ತುಕೊಂಡು ಬಂದು ಸದನದಿಂದ ಹೊರಹಾಕಿದರು.