Webdunia - Bharat's app for daily news and videos

Install App

ನಾಡಗೀತೆಗೆ ಹೊಸ ಟಚ್ ನೀಡಿದ ಕನ್ನಡತಿ

Webdunia
ಮಂಗಳವಾರ, 1 ನವೆಂಬರ್ 2016 (17:18 IST)
ಬೆಂಗಳೂರು: ನಾಡಗೀತೆಯಾದ 'ಜೈ ಭಾರತ ಜನನಿಯ ತನುಜಾತೆ' ಕೇಳದ ಕಿವಿಗಳಿಲ್ಲ. ಈವರೆಗೆ ಒಂದೇ ರಾಗ ಸಂಯೋಜನೆಯಲ್ಲಿ ಕೇಳುತ್ತಿದ್ದೇವು. ಆದರೆ, ಕರ್ನಾಟಕ ರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಡಾ. ಶಮಿತಾ ಮಲ್ನಾಡ್ ಈ ಹಾಡಿಗೆ ಹೊಸ ರೂಪ ನೀಡಿ ರಾಗ ಸಂಯೋಜನೆ ಮಾಡಿದ್ದಾರೆ. ಅಲ್ಲದೆ, ಕರ್ನಾಟಕದ 5 ತಲೆಮಾರಿನ 59 ಹಿನ್ನಲೆ ಗಾಯಕರನ್ನು ಒಟ್ಟಿಗೆ ಸೇರಿಸಿ ಹಾಡಿಗೆ ದನಿಯಾಗಿಸಿದ್ದಾರೆ.
 
ಕನ್ನಡದಲ್ಲಿಯೇ ಇದೊಂದು ವಿಭಿನ್ನ ಪ್ರಯೋಗವಾಗಿದ್ದು, ಒಟ್ಟು 4.48 ನಿಮಿಷದ ಈ ಹಾಡು ವಿಡಿಯೋ ರೂಪದಲ್ಲಿ ರಚಿತವಾಗಿದೆ. ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ವರಿಂದ ಆರಂಭವಾಗುವ ಹಾಡು ಕಸ್ತೂರಿ ಶಂಕರ, ಬಿ.ಆರ್. ಛಾಯಾ, ಪುತ್ತೂರು ನರಸಿಂಹ ನಾಯಕ, ಲತಾ ಹಂಸಲೇಖ, ಗುರುರಾಜ ಹೊಸಕೋಟೆ, ಮಂಜುಳಾ ಗುರುರಾಜ, ರಮೇಶ್ಚಂದ್ರ, ಸಂಗೀತ ಕಟ್ಟಿ, ರಾಜೇಶ ಕೃಷ್ಣನ್ ಸೇರಿದಂತೆ 29 ಗಾಯಕರು ಈ ಹಾಡಿಗೆ ದನಿ ಸೇರಿಸಿದ್ದಾರೆ.
 
ಆಡಿಯೋ ಜತೆಗೆ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳಗಳು, ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಸೇರಿಸಿರುವುದರಿಂದ ಇನ್ನಷ್ಟು ಸುಂದರವಾಗಿ ಮೂಡಿಬಂದಿದೆ. 'ಮಧುರ ಪಿಸು ಮಾತಿಗೆ' ಹಾಡಿನ ಮೂಲಕ ಸಹೃದಯರ ಮನಗೆಲ್ಲುವಲ್ಲಿ ಯಶಸ್ವಿಯಾದ ಕನ್ನಡತಿ ಡಾ. ಶಮಿತಾ ಮಲ್ನಾಡ್ರ ಹೊಸ ಪ್ರಯೋಗ ಮೊದಲ ದಿನವೇ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸತದೊಂದಿಗೆ ವಿಭಿನ್ನವಾಗಿ ಮೂಡಿಬಂದಿರುವ ನಾಡಗೀತೆಗೆ ಸಂಗೀತ, ಪರಿಕಲ್ಪನೆ, ನಿರ್ವಹಣೆ, ನಿರ್ದೇಶನ ಎಲ್ಲವೂ ಅವರದ್ದೇ ಎನ್ನುವುದು ಮತ್ತೊಂದು ವಿಶೇಷ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರು: ಉಗ್ರ ನಾಸಿರ್ ಜೈಲಿನಿಂದ ಪರಾರಿಯಾಗಲು ನಡೆದಿತ್ತು ಖತರ್ನಾಕ್ ಪ್ಲ್ಯಾನ್

ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

ಥಾಣೆ: ಮುಟ್ಟಾಗಿದೆಯಾ ಎಂದು ಬಾಲಕಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್

ಮುಂದಿನ ಸುದ್ದಿ
Show comments