ಹಾಸನ: ಹಾಸನದ ಭಾರತೀ ಕಲ್ಯಾಣ ಮಂಟಪದಲ್ಲಿ ಅಪರೂಪದ ಮದುವೆ ನಡೆಯಿತು. ಕನ್ನಡದ ಹುಡುಗಿಯನ್ನು ರಷ್ಯಾದ ವರ ಭಾರತೀಯ ಸಂಪ್ರದಾಯದಂತೆ ಕೈ ಹಿಡಿದಿದ್ದು ಈ ಮದುವೆಯ ವಿಶೇಷತೆ.
ರಷ್ಯಾದ ಡೆನಿಸ್ ಸಂಗೀತಗಾರ. ಹಾಸನದ ಹುಡುಗಿ ಪುನೀತಾ ಸಾಫ್ಟ್ ವೇರ್ ಇಂಜಿನಿಯರ್. ಇವರಿಬ್ಬರ ನಡುವೆ ಅದು ಹೇಗೋ ಪ್ರೀತಿಯಾಯ್ತು. ಇವರ ಮದುವೆಗೆ ಹಿರಿಯರ ಒಪ್ಪಿಗೆಯೂ ಸಿಕ್ಕಿತು. ಹೀಗಾಗಿ ಹಿರಿಯರ ಸಮ್ಮುಖದಲ್ಲಿ ಭಾರತೀಯ ಸಂಪ್ರದಾಯದಂತೆ ಇವರಿಬ್ಬರೂ ಸಪ್ತಪದಿ ತುಳಿದರು.
ಮದುವೆಗೆ ಎರಡೂ ಮನೆಯವರು ಸಾಕ್ಷಿಯಾದರು. ಸಂಗೀತ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರಿಗೆ ಪ್ರೀತಿಯಾಯ್ತಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ