ರೇವ್ ಪಾರ್ಟಿ ನಡೆದ ಸ್ಥಳದಲ್ಲಿ ಕನ್ನಡ ನಟ ಹರ್ಷ: ಮಾಧ್ಯಮಗಳಿಗೆ ಹೇಳಿದ್ದೇ ಬೇರೆ

Krishnaveni K
ಮಂಗಳವಾರ, 21 ಮೇ 2024 (10:34 IST)
Photo Courtesy: Instagram
ಬೆಂಗಳೂರು: ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ ನಲ್ಲಿ ನಿನ್ನೆ ಬೆಳಗಿನ ಜಾವ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು. ಈ ವೇಳೆ ತೆಲುಗು ನಟಿಯರು, ಸಮಾಜದಲ್ಲಿ ಗಣ್ಯರೆನಿಸಿಕೊಂಡ ಕೆಲವರು ಸಿಕ್ಕಿಬಿದ್ದಿದ್ದಾರೆ.

ಪೊಲೀಸರು ಘಟನಾ ಸ್ಥಳದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಬರ್ತ್ ಡೇ ಪಾರ್ಟಿ ಎಂದು ಫ್ಲೆಕ್ಸ್ ಹಾಕಿ ರಾತ್ರಿಯಿಡೀ ಪಾರ್ಟಿ ಮಾಡಲಾಗಿತ್ತು. ಒಳಗೆ ನಟಿಮಣಿಯರನ್ನು ಕರೆಸಿಕೊಂಡು ಡ್ರಗ್ಸ್ ಪಾರ್ಟಿ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ರಾಜಕಾರಣಿಯೊಬ್ಬರ ಪಾಸ್ ಇದ್ದ ಕಾರು ಕೂಡಾ ಪತ್ತೆಯಾಗಿತ್ತು.

ವಿಶೇಷವೆಂದರೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಘಟನಾ ಸ್ಥಳಕ್ಕೆ ಕನ್ನಡ ನಟ ಹರ್ಷ ಕೂಡಾ ಬಂದಿದ್ದರು. ಅವರನ್ನು ಅಲ್ಲಿ ನೋಡಿ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ನನಗೂ ರೇವ್ ಪಾರ್ಟಿಗೂ ಸಂಬಂಧವಿಲ್ಲ. ಪೊಲೀಸ್ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಬಂದಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಘಟನೆಯಲ್ಲಿ ಹಲವು ತೆಲುಗು ನಟಿಯರು ಭಾಗಿಯಾಗಿದ್ದರು. ಪೊಲೀಸ್ ರೈಡ್ ಆಗುತ್ತಿದ್ದಂತೇ ಮುಖಕ್ಕೆ ಮರೆಮಾಚಿಕೊಂಡು ನಟಿಮಣಿಯರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಇದೀಗ ಎಲ್ಲರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಡ್ರಗ್ಸ್ ಸೇವನೆ ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಮುಂದಿನ ಸುದ್ದಿ