Select Your Language

Notifications

webdunia
webdunia
webdunia
webdunia

ಭೈರತಿ ಸುರೇಶ್ ಭೇಟಿ ಮಾಡಿದ ಹಂಡಿಭಾಗ್ ಪೋಷಕರು

ಭೈರತಿ ಸುರೇಶ್ ಭೇಟಿ ಮಾಡಿದ ಹಂಡಿಭಾಗ್ ಪೋಷಕರು
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2016 (16:04 IST)
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಡಿಭಾಗ್ ಕುಟುಂಬದ ಸದಸ್ಯರು ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಅವರನ್ನು ಭೇಟಿ ಮಾಡಿದ್ದರು.
 
ಈ ವೇಳೆ ಕಲ್ಲಪ್ಪ ಹಂಡಿಭಾಗ್ ಕುಟುಂಬ ಸದಸ್ಯರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಎಮ್ಎಲ್‌ಸಿ ಭೈರತಿ ಸುರೇಶ್ ಅವರು 7 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡಿದರು.
 
ಕಲ್ಲಪ್ಪ ಹಂಡಿಭಾಗ್ ಕುರಿತು ಗಾಂಡೂ ಪದ ಬಳಕೆ ಮಾಡಿದ್ದ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಕಲ್ಲಪ್ಪ ಹಂಡಿಭಾಗ್ ಅವರ ತಂದೆ ಬಸಪ್ಪನವರು ಗರಂ ಆದರು.
 
ನನ್ನ ಮಗ ಕಲ್ಲಪ್ಪ ಹಂಡಿಭಾಗ್ ಗಾಂಡೂ ಅಲ್ಲ. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣನೇ ಗಾಂಡೂ ಇರಬಹುದು. ನನ್ನ ಮಗ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂದು ತಿಳಿಸಿದರು. 
 
ವ್ಯಕ್ತಿಯೋರ್ವನನ್ನು ರೌಡಿಗಳಿಂದ ಅಪಹರಣ ಮಾಡಿಸಿ ಹತ್ತು ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ ಎಂಬ ಆರೋಪ ಹೊತ್ತು ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಡೂ ಪದ ಬಳಕೆ ಸಮರ್ಥಿಸಿಕೊಂಡ ಶಾಸಕ ಎಚ್.ಸಿ.ಬಾಲಕೃಷ್ಣ