ಬೆಂಗಳೂರು: ಮಾಸ್ತಿ ಗುಡಿ ಕ್ಲೈಮಾಕ್ಸ್ ಶೂಟಿಂಗ್ ವೇಳೆ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಅನಿಲ್ ಮೃತದೇಹದ ಅಂತ್ಯಕ್ರಿಯೆ ನಿನ್ನೆ ಸಂಜೆ ಬನಶಂಕರಿ ರುದ್ರಭೂಮಿಯಲ್ಲಿ ನೆರವೇರಿಸಲಾಯ್ತು.
ನಿನ್ನೆ ಬೆಳಗಿನ ಜಾವ 5.50 ರ ಸುಮಾರಿಗೆ ಅನಿಲ್ ಮೃತದೇಹವನ್ನೂ ಪತ್ತೆ ಮಾಡಿತ್ತು.
ಉದಯ್ ಮೃತದೇಹ ಸಿಕ್ಕ ಕೆಲವೇ ಮೀಟರ್ ದೂರದಲ್ಲಿ ಅನಿಲ್ ಮೃತದೇಹ ತೇಲುತ್ತಿತ್ತು ಎಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎನ್ ಡಿ ಆರ್ ಎಫ್ ಸಿಬ್ಬಂದಿ ಸ್ಪಷ್ಟಪಡಿಸಿದ್ದರು. ಕೆರೆ ದಡದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.
ಶವವನ್ನು ಮನೆಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಬಳಿಕ ಅವರ ತಾತ ವೆಂಕಟಸ್ವಾಮಿಯ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯ್ತು.
ಕಾರ್ಯಾಚರಣೆಯನ್ನ ನೋಡಲು ಬಂದಾಗ ಜೇನುನೊಣಗಳ ದಾಳಿಗೊಳಗಾಗಿ ನೀರಲ್ಲಿ ಹಾರಿ ಜಲಸಮಾಧಿಯಾಗಿದ್ದ ಅಭಿಮಾನಿ ಯಲ್ಲಯ್ಯ ನ ಮೃತದೇಹವನ್ನು ಸಹ ಎನ್‌ಡಿಆರ್‌ಎಫ್ ತಂಡ ಸಿಬ್ಬಂದಿ ಹೊರತೆಗೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ