Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಈಗ ಚಪ್ಪಲಿ ಕಂಪನಿಯ ಬ್ರಾಂಡ್ ಅಂಬಾಸಿಡರ್

ಸೋನಾಕ್ಷಿ ಈಗ ಚಪ್ಪಲಿ ಕಂಪನಿಯ ಬ್ರಾಂಡ್ ಅಂಬಾಸಿಡರ್
, ಬುಧವಾರ, 24 ಡಿಸೆಂಬರ್ 2014 (09:15 IST)
ರಿಲಾಕ್ಸೋ ಫ್ಲೈಟ್  ಪಾದರಕ್ಷೆಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾಳೆ  ಸೋನಾಕ್ಷಿ ಸಿನ್ಹ.ಸಾಮಾನ್ಯವಾಗಿ ಚಿತ್ರರಂಗದಲ್ಲಿ ಖ್ಯಾತಿ ಹೊಂದಿದ ಕಲಾವಿದರನ್ನು ತಮ್ಮ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಳ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಪರಂಪರೆ. 
ಹೆಚ್ಚಾಗಿ ಸೋಪು, ಕ್ರೀಮು, ಸೂಟಿಂಗ್ಸ್, ಹೀಗೆ ಕೆಲವು ವಸ್ತುಗಳತ್ತ ಗಮನ ಕೇಂದ್ರೀಕರಿಸಿದ್ದ ಜಾಹೀರಾತು ಲೋಕ ಈಗ ಚಪ್ಪಲಿ ಕಂಪನಿಗಳ ಬಗ್ಗೆಯೂ ಸಹಿತ ಹೆಚ್ಚು ಗಮನ ನೀಡಿದೆ. ಕಳೆದ ಕೆಲವಾರು  ವರ್ಷಗಳಿಂದ ಚಪ್ಪಲಿಗೂ ಜೀವ ಸಿಕ್ಕಿದೆ.ಅದೇ ನಿಟ್ಟಿನಲ್ಲಿ ಸೋನಾಕ್ಷಿ ಅವಕಾಶ ಪಡೆದಿದ್ದಾಳೆ. ಈಗ ಆಕೆ ರಿಲಾಕ್ಸೋ ಫ್ಲೈಟ್  ಚಪ್ಪಲಿ ಧರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳುತ್ತಿದ್ದಾಳೆ.  
 
ರಿಲಾಕ್ಸೋ ಫುಟ್ವೇರ್  ಕಂಪನಿ ತಯಾರು ಮಾಡುತ್ತಿರುವ ಫ್ಲೈಟ್ ಪಾದರಕ್ಷೆಗಳು ಈಗಿನ ಯುವ ಜನಾಂಗ ಬಯಸುವಂತೆ ಇದೆ. ಎಂದು ರಿಲಾಕ್ಸೋ ಫುತ್ವೆರ್ ಈಡಿ  ಗೌರವ್ ದುವಾ ಹೇಳಿದ್ದರೆ. ತಮ್ಮ ಕಂಪನಿ ಹತ್ತು ಪ್ಲಾಂಟ್ ಗಳನ್ನೂ ಹೊಂದಿದ್ದು, ಅಲ್ಲಿ ದಿನಕ್ಕೆ ನಾಲ್ಕೂವರೆ ಲಕ್ಷಗಳಷ್ಟು ಪಾದರಕ್ಷೆಗಳನ್ನು  ತಯಾರು ಮಾಡುತ್ತಿದೆಯಂತೆ. ಫ್ಲೈಟ್ ಅಲ್ಲದೆ ಸ್ಪಾರ್ಕ್ಸ್, ಸ್ಕೂಲ್ಮೆಟ್,ಇಲೇನಾ, ಕ್ಯಾಜುವೆಲ್ ಹೀಗೆ ಹಲವಾರು ಬಗೆಯ ಪಾದರಕ್ಷೆಗಳನ್ನು ತಯಾರು ಮಾಡುತ್ತಿರುವುದಾಗಿ ಹೇಳಿದ್ದಾರೆ. 

Share this Story:

Follow Webdunia kannada