Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿಗೆ ಏಳು ವರ್ಷ ಜೈಲು..?!

ಅತ್ಯಾಚಾರ ಆರೋಪಿಗೆ ಏಳು ವರ್ಷ ಜೈಲು..?!
ಗದಗ , ಬುಧವಾರ, 1 ಏಪ್ರಿಲ್ 2015 (16:02 IST)
ಅತ್ಯಾಚಾರ ಆರೋಪಿಯೋರ್ವನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀಪ್ರು ಪ್ರಕಟಿಸಿದೆ. 
 
ನ್ಯಾಯಾಧೀಶ ಎಸ್.ಎಸ್.ಮುರಗೋಡ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪನ್ನು ಪ್ರಕಟಿಸಿದ್ದು, 7 ವರ್ಷ ಕಠಿಣ ಶಿಕ್ಷೆ ಪ್ರಕಟಿಸುವ ಜೊತೆಗೆ 2 ಸಾವಿರ ದಂಡವನ್ನೂ ವಿಧಿಸಿದೆ. ಶಿಕ್ಷೆಗೊಳಗಾದ ಅತ್ಯಾಚಾರ ಆರೋಪಿಯನ್ನು ದಾದಾ ಕಲಂದರ್ ಚಿಂಚೋಳಿ(21) ಎನ್ನಲಾಗಿದ್ದು, ಈತ 2013ರ ಜ.10ರಂದು 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. 
 
ಪ್ರಕರಣವು ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖೆ ನಡೆಸಲಾಗಿತ್ತು. ಪ್ರಕರಣದಲ್ಲಿ ಕಲಂದರ್ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಂತಿಮವಾಗಿ ಕೋರ್ಟ್ ಇಂದು ಶಿಕ್ಷೆ ವಿಧಿಸಿ ಆದೇಶಿಸಿದೆ.  

Share this Story:

Follow Webdunia kannada