ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನ ಗುರುತಿಸಿ ಪ್ರತಿವರ್ಷ ಚೈತನ್ಯ ಇಂಟರ್ ನ್ಯಾಷನಲ್ ಆರ್ಟ್ಸ್ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಹಾಗೆ ಈ ವರ್ಷ ಅತ್ಯುತ್ತಮ ಮಹಿಳಾ ಕೇಂದ್ರಿತ ಪುಸ್ತಕವಾಗಿ ಅವಳ ತಲ್ಲಣಗಳು ಪುಸ್ತಕವನ್ನ ಆಯ್ಕೆ ಮಾಡಿಕೊಂಡಿದ್ದು, ಪತ್ರಕರ್ತೆ ಮತ್ತು ಲೇಖಕಿಯಾದ ಗೀತಾಂಜಲಿ ಅವರಿಗೆ ಭಾನುವಾರ ಕಾರ್ಯಕ್ರಮದಲ್ಲಿ ಪುರಸ್ಕರಿಸಿ ಸನ್ಮಾನಿಸಲಾಯಿತು.
ಪತ್ರಕರ್ತೆ ಮತ್ತು ಲೇಖಕಿ ಗೀತಾಂಜಲಿ ಬರೆದ ಚೊಚ್ಚಲ ಪುಸ್ತಕವನ್ನ ಕಳೆದ ವರ್ಷ ಜನವರಿ 7 ರಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ವತಿಯಿಂದ ಸರ್ಕಾರ ಬಿಡುಗಡೆ ಮಾಡಿತ್ತು.ಈಗ ಪುಸ್ತಕದ ಬಗ್ಗೆ ಎಲ್ಲೆಲ್ಲೂ ಶ್ಲಾಘನೆ ವ್ಯಕ್ತವಾಗ್ತಿದ್ದು,ಮಹಿಳೆಯರ ಅಚ್ಚುಮೆಚ್ಚಿನ ಗ್ರಂಥವಾಗಿ ಹೊರಹೊಮ್ಮಿದೆ. ಹೀಗಾಗಿ ಪುಸ್ತಕ ಈಗ ಮತ್ತೊಂದು ಪ್ರಶಸ್ತಿಗೆ ಭಾಜನವಾಗಿತ್ತು.ಇನ್ನೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ.ವಿಮಲಾ ಸುಬ್ರಹ್ಮಣ್ಯ ಸಮಾಜಸೇವಕರು,ಡಾ.ಈಶ್ವರ್ ಎಸ್ ರಾಂಖಡು, ಸಮಾಜಸೇವಕರು, ಶೀಮತಿ ರೇಣುಕಾ ಚರಣ್ ಮಾಧ್ಯಮಕ್ಷೇತ್ರ,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.