Select Your Language

Notifications

webdunia
webdunia
webdunia
webdunia

ಉದ್ಯೋಗ ಅರಸಿ ಬಂದ ಯುವತಿಯ ಮೇಲೆ ಅತ್ಯಾಚಾರ

ಉದ್ಯೋಗ ಅರಸಿ ಬಂದ ಯುವತಿಯ ಮೇಲೆ ಅತ್ಯಾಚಾರ
ಬೆಂಗಳೂರು , ಶುಕ್ರವಾರ, 17 ಅಕ್ಟೋಬರ್ 2014 (14:05 IST)
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿಯ ಮೇಲೆ ಅವರ ಸಂಬಂಧಿಯೇ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ  ತಡವಾಗಿ ಬೆಳಕಿಗೆ ಬಂದ ಘಟನೆ ಅಂಚೆಪಾಳ್ಯದಲ್ಲಿ ನಡೆದಿದೆ.
 
ಅ.14 ರಂದು ಈ ಘಟನೆ ನಡೆದ್ದಿದ್ದು, ಧರ್ಮಪ್ಪ (45) ಎಂಬಾತ ಈ ನೀಚ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದು ಬಂದಿದೆ.
 
19 ವರ್ಷದ ಯುವತಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದಳು. ಒಂದು ದಿನ ಯಾರೂ ಇಲ್ಲದೇ ಇರುವ ಸಮಯವನ್ನು ನೋಡಿ ಸಂಬಂಧಿನೇ ಬಂದು ಈ ನೀಚ ಕೃತ್ಯ ನಡೆಸಿದ್ದಾನೆ. 
 
ಆದರೆ ಯುವತಿ ಈ ವಿಷಯವನ್ನು ಯಾರಲ್ಲೂ ತಿಳಿಸದೆ ತನ್ನಲ್ಲಿಯೇ ಬಚ್ಚಿಟ್ಟುಕೊಂಡಿದ್ದಳು, ಇತ್ತೀಚೆಗೆ ತನ್ನ ತಂದೆ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.
 
ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
 

Share this Story:

Follow Webdunia kannada