Webdunia - Bharat's app for daily news and videos

Install App

ಕನ್ಹೈಯ್ಯ ನಿರಪರಾಧಿ ಎಂದು ಸಾಬೀತಾಗಿಲ್ಲ!

Webdunia
ಗುರುವಾರ, 2 ಮಾರ್ಚ್ 2017 (07:54 IST)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕನ್ಹೈಯ್ಯ ಕುಮಾರ್ ದೇಶದ್ರೋಹದ ಆರೋಪದಿಂದ ಮುಕ್ತನಾಗಿಲ್ಲ. ತನಿಖೆ ಇನ್ನು ಮುಂದುವರೆದಿದೆ, ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಕನ್ನೈಯ್ಯ ಕುಮಾರ್ ದೋಷಮುಕ್ತನಾಗಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದರಿಂದ ಪೊಲೀಸರು ಈ ಸ್ಪಷ್ಟನೆಯನ್ನು ನೀಡಿದ್ದಾರೆ.
ಕನ್ನೈಯ್ಯನ ಧ್ವನಿಮಾದರಿ ಪರೀಕ್ಷಿಸಿದಾಗ ಘೋಷಣೆ ಕೂಗಿದವರಲ್ಲಿ ಆತ ಇರಲಿಲ್ಲ ಎಂಬುದು ಸಾಬೀತಾಗಿತ್ತು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಆತ ಅಲ್ಲಿರಲಿಲ್ಲ, ಹೀಗಾಗಿ ದೇಶದ್ರೋಹ ಆರೋಪದಿಂದ ಆತ ಮುಕ್ತನಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. 
 
ಆದರೆ ದೆಹಲಿ ಪೊಲೀಸ್ ವಿಶೇಷ ಘಟಕದ ಉಪಾಯುಕ್ತ್ತ ಪ್ರಮೋದ ಸಿಂಗ್ ಕುಶವಾ ನಮ್ಮ ತನಿಖೆ ಇನ್ನು ಪೂರ್ಣಗೊಂಡಿಲ್ಲ, ಆರೋಪಪಟ್ಟಿಯೇ ಸಿದ್ಧಗೊಂಡಿಲ್ಲ ಎಂದಿದ್ದಾರೆ.
 
ಧ್ವನಿ ಮಾದರಿ ಪರೀಕ್ಷೆ ಮಾಡಲಾಗಿ  ಘೋಷಣೆ ಕೂಗಿದ ಧ್ವನಿ ಕನ್ನೈಯ್ಯನವರ ಧ್ವನಿಗೆ ಹೋಲಿಕೆಯಾಗುತ್ತಿಲ್ಲ.ದೇಶವಿರೋಧಿ ಘೋಷಣೆ ಕೂಗಿದವರೆಲ್ಲರೂ ಕಾಶ್ಮೀರದವರೆಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರು ಉಪನ್ಯಾಸಕರು ಎನ್ನಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments