ಪಕ್ಷಕ್ಕೆ ದ್ರೋಹ ಮಾಡಿರುವವರ ಮನೆ ಮುಂದೆ ಪ್ರತಿಭಟನೆ ಮಾಡುವುದು ವ್ಯರ್ಥವೆಂದು ಹೇಳಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿಚಕುಮಾರಸ್ವಾಮಿ, ಜೆಡಿಎಸ್ ಭಿನ್ನಮತಿಯರು ಭಸ್ಮಾಸುರ ಮತ್ತು ಬಲಿ ಚಕ್ರವರ್ತಿಯಂತೆ ಎಂದು ಹೇಳಿದ್ದಾರೆ
ರಾಜಕೀಯದಲ್ಲಿ ದೊಡ್ಡವ್ಯಕ್ತಿಯಾಗಿ ಬೆಳೆದಿರುವ ಜಮೀರ್ ಅಹ್ಮದ್, ಅವರನ್ನು ರಾಜಕೀಯವಾಗಿ ಬೆಳೆಸಿರುವ ದೇವೇಗೌಡರನ್ನೆ ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಭಿನ್ನಮತ ಎಂಬುದು ದೇವತೆಗಳನ್ನೇ ಬಿಟ್ಟಿಲ್ಲ ಇನ್ನೂ ನಮ್ಮಂತ ಮಾನವರನ್ನು ಬಿಡುತ್ತದೆಯೇ. ಜಪ ಮಾಡಿ ಶಿವನಿಂದ ವರ ಪಡೆದು, ನಂತರ ದೇವತೆಗಳ ಮೇಲೆ ಆಕ್ರಮಣ ಮೋಸ ಮಾಡಿರುವಂತಹ ನಿದರ್ಶನಗಳು ಇತಿಹಾಸದಲ್ಲಿದೆ. ಹಾಗೆಯೇ ಜಮೀರ್ ಅಹ್ಮದ್ ಕೂಡಾ ಪಕ್ಷದಿಂದ ಬೆಳೆದು ಬಂದು ಇಂದು ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ನಾಯಕರನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ ಎಂದು ಇಂದು ಪಕ್ಷದ ಕಾರ್ಯಕರ್ತರು, ಜಮೀರ್ ಅಹ್ಮದ್ ಫ್ಯ್ಯಾಟ್ ಎದುರು ಪ್ರತಿಭಟನೆ ನಡೆಸಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.