Select Your Language

Notifications

webdunia
webdunia
webdunia
webdunia

ಅರಮನೆ ಮೈದಾನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ

ಅರಮನೆ ಮೈದಾನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ
ಬೆಂಗಳೂರು , ಶನಿವಾರ, 24 ಜನವರಿ 2015 (11:20 IST)
ಜೆಡಿಎಸ್ ಪಕ್ಷವು ಪಕ್ಷ ಸಂಘಟನೆಗಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಸಮಾವೇಶವಕ್ಕೆ ಪಕ್ಷದ ವರಿಷ್ಠ ದೇವೇಗೌಡ ಚಾಲನೆ ನೀಡಿದರು.  
 
ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡ, ಪಕ್ಷದ ಬಲವರ್ಧನೆಗೆ ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು, ಪಕ್ಷದ ಎಲ್ಲಾ ನಾಯಕರೂ ಕೂಡ ಭಾಗವಹಿಸಲಿದ್ದಾರೆ. ಅಲ್ಲದೆ ಸಮಾವೇಶದ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೊಂದಣಿ ಮಾಡಿಕೊಳ್ಳುವ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತದೆ. ಇನ್ನು ಸಮಾವೇಶದಲ್ಲಿ 10 ಅಂಶಗಳ ನಿಯಮಗಳ ಪ್ರಕರಟಿಸಲಿದ್ದು, ಅವುಗಳನ್ನು ಎಲ್ಲರೂ ಪಾಲಿಸಲೇಬೇಕು. ಇಲ್ಲವಾದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಮಾವೇಶದ ಬಳಿಕ ಜಿಲ್ಲೆಯ ಎಲ್ಲಾ 30 ಜಿಲ್ಲೆಗಳಲ್ಲಿಯೂ ಸದಸ್ಯರ ನೊಂದಣಿ ಕಾರ್ಯವನ್ನು ಆಯೋಜಿಸಿ ಪಕ್ಷ ಸಂಘಟನೆಗೆ ಶ್ರಮಿಸಲಾಗುವುದು ಎಂದರು.  
 
ಬಳಿಕ ಮಾತನಾಡಿದ ಅವರು, ಪಕ್ಷದ ಪ್ರಾದೇಶಿಕ ಕಚೇರಿ ನಿರ್ಮಾಣ ಸಂಬಂಧವೂ ಕೂಡ ಸಮಾವೇಶದಲ್ಲಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 
 
ಸಮಾವೇಶ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹ್ಮದ್, ಪಕ್ಷದಿಂದ ನನಗೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾನು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 
ಈ ಹಿಂದೆ ಪಕ್ಷದ ವರಿಷ್ಠರೊಂದಿಗೆ ವಿಮುಖರಾಗಿ ವರಿತಿಸುತ್ತಿದ್ದ ಇಕ್ಬಾಲ್ ಅನ್ಸಾರಿ, ಮಾಗಡಿ ಬಾಲಕೃಷ್ಣ, ಹಾಗೂ ಚೆಲುವರಾಯಸ್ವಾಮಿ ಸೇರಿದಂತೆ ಇತರರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  
 

Share this Story:

Follow Webdunia kannada